ಕಾಂಗ್ರೆಸ್ದು ಬೇಜವಾಬ್ದಾರಿ ನಡೆರ: ಕೆಎಸ್ ಈಶ್ವರಪ್ಪ
ಕಾಂಗ್ರೆಸ್ಸಿನವರು ಸತ್ತಿಲ್ಲ, ಬದುಕಿದ್ದೀವಿ ಅಂತಾ ತೋರಿಸೋಕೆ ಮಾತಾಡ್ತೀದಾರೆ. ಅದರಲ್ಲೂ ಸಿದ್ದರಾಮಯ್ಯ, ಡಿಕೆಶಿ ಮತ್ತು ಪ್ರಿಯಾಂಕ ಖರ್ಗೆ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಬಿಟ್ ಕಾಯಿನ್ ಹಗರಣ ಬಗ್ಗೆ ಕೊಪ್ಪಳದಲ್ಲಿ ಸಚಿವ ಕೆ.ಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಪ್ರಿಯಾಂಕಾ ಖರ್ಗೆ ಆ ಭಾಗದಲ್ಲಿ ಖರ್ಗೆ ವಸೂಲಿ ಕಿಂಗ್. ಗೃಹ ಸಚಿವ ಆರಗ ಜ್ಞಾನೇಂದ್ರ ವಸೂಲಿ ಮಾಡಲ್ಲ. ಬಿಜೆಪಿ ಯಾವ ನಾಯಕರು, ಮುಖ್ಯಮಂತ್ರಿ ಬದಲಾವಣೆ ಆಗ್ತಾರೆ ಅಂತಾ ಹೇಳಿಲ್ಲ. ಈ ಬಾರಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾಗಲ್ಲ,ಬೊಮ್ಮಾಯಿನೇ ಇರ್ತಾರೆ ಎಂದು ಹೇಳಿದರು.