ಸರ್ವರ ಏಳ್ಗೆಗೆ ಶ್ರಮಿಸಿದ ಡಾ.ಬಿ.ಆರ್ ಅಂಬೇಡ್ಕರ್ |Shiggaon|
ದಲಿತರ ಶ್ರೇಯೋಭಿವೃದ್ಧಿಗೆ ಅಂಬೇಡ್ಕರ್ ಅವರು ತಮ್ಮ ಜೀವನವನ್ನೇ ಸವೆದಿದ್ದಾರೆ ಇವರು ಸರ್ವರಿಗೂ ಸಮಬಾಳು ಸಮಪಾಲು ಸಿಗಬೇಕೆಂದು ದೊಡ್ಡ ಕನಸು ಕಂಡಿದ್ದರು ಇದರಿಂದಾಗಿ ದೇಶಕ್ಕೆ ಅತ್ಯಂತ ಮಹತ್ವವಾದ ಸಂವಿಧಾನ ತಂದು ಕೊಟ್ಟಿದ್ದಾರೆ ಎಂದು ಅಶೋಕ ಕಾಳೆ ಹೇಳಿದರು. ಪಟ್ಟಣದ ಹಳೆ ಬಸ್ ನಿಲ್ದಾಣ ಎದುರಿನ ಸ್ಥಳದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಅಂಬೇಡ್ಕರ್ ಅವರ ಜೀವನ ಚರಿತ್ರೆಯುಳ್ಳ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಹನುಮಂತಪ್ಪ ಬಂಡಿವಡ್ಡರ, ಪಕ್ಕೀರಗೌಡ ಪಾಟೀಲ, ರಾಜೇಶ್ವರಿ ಪಾಟೀಲ, ಸೋಮಣ್ಣ ಬೇವಿನಮರದ, ಎಸ್.ಎಸ್ ಶಿವಳ್ಳಿ, ಬಸುವರಾಜ ಬಂಡಿವಡ್ಡರ, ರಮೇಶ ಚೌವ್ಹಾನ ಮಕ್ಕಳು ಉಪಸ್ಥಿತರಿದ್ದರು.