ಮಂಗ ಸೆರೆಹಿಡಿದ ಅರಣ್ಯ ಇಲಾಖೆ
ಬೀದರ್
ಬೀದರ್ ನಗರದಲ್ಲಿ ಕಳೆದೊಂದು ವಾರದಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಮಂಗನನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದು ಪಶು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಬೀದರ್ ನಗರದ ಜ್ಯೋತಿ ಕಾಲೋನಿ, ಎಸ್ ಬಿಐ ಕಾಲೋನಿಯ ಜನರ ಮೇಲೆ ಹುಚ್ಚು ಮಂಗ ದಾಳಿ ಮಾಡಿ ಹತ್ತಾರು ಜನರನ್ನು ಘಾಸಿಗೊಳಿಸಿತ್ತು. ಹೀಗಾಗಿ ಬಡಾವಣೆಯ ಜನರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಹುಚ್ಚು ಮಂಗನನ್ನ ಹಿಡಿಯುವಂತೆ ಮನವಿ ಮಾಡಿದ್ದರು.