ಕನಸಿನಲ್ಲಿಯೂ ನೀವು ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ಟಾಂಗ್​ ಕೊಟ್ಟ ಅನುರಾಗ್ ಠಾಕೂರ್

ಕನಸಿನಲ್ಲಿಯೂ ನೀವು ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ: ರಾಹುಲ್ ಗಾಂಧಿ ಟಾಂಗ್​ ಕೊಟ್ಟ ಅನುರಾಗ್ ಠಾಕೂರ್
ರಾಹುಲ್ ಗಾಂಧಿ ನನ್ನ ಹೆಸರು ಸಾವರ್ಕರ್​​ ಅಲ್ಲ, ನಾನು ಯಾರಿಗೂ ಕ್ಷಮೆ ಕೇಳಲ್ಲ ಎಂದಿದ್ದರು. ಈ ವಿಚಾರವಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್​ ಭಾನುವಾರ ಸಾಲು ಸಾಲು ಟ್ವೀಟ್​ ಮಾಡುವ ಮೂಲಕ ಕಿಡಿಕಾರಿದ್ದಾರೆ.

ದೆಹಲಿ: ಸಂಸತ್ತಿನಿಂದ ಅನರ್ಹಗೊಳಿಸಿದ ಒಂದು ದಿನದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದನನ್ನ ಹೆಸರು ಸಾವರ್ಕರ್ (Savarkar) ಅಲ್ಲ, ನಾನು ಯಾರಿಗೂ ಕ್ಷಮೆ ಕೇಳಲ್ಲ ಎಂದಿದ್ದರು.

ಈ ವಿಚಾರವಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್​ ಭಾನುವಾರ ಸಾಲು ಸಾಲು ಟ್ವೀಟ್​ ಮಾಡುವ ಮೂಲಕ ಕಿಡಿಕಾರಿದ್ದಾರೆ. ಪ್ರೀತಿಯ ಗಾಂಧಿ ಅವರೇ, ನಿಮ್ಮ ಅತ್ಯುತ್ತಮ ಕನಸಿನಲ್ಲಿಯೂ ಸಹ ನೀವು ಸ್ವಾತಂತ್ರ್ಯ ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ. ಏಕೆಂದರೆ ಸಾವರ್ಕರ್ ಆಗಲು ಬಲವಾದ ಸಂಕಲ್ಪ, ಭಾರತದ ಮೇಲೆ ಪ್ರೀತಿ, ನಿಸ್ವಾರ್ಥತೆ ಮತ್ತು ಬದ್ಧತೆಯ ಅಗತ್ಯವಿದೆ. ನೀವು ಸಾವರ್ಕರ್ ಆಗಲು ಸಾಧ್ಯವೇ ಇಲ್ಲ ಎಂದಿದ್ದಾರೆ. ಆ ಮೂಲಕ ನಿಮಗೂ ಮತ್ತು ಸಾವರ್ಕರ್​ ಅವರಿಗೆ ಹೋಲಿಕೆ ಸಲ್ಲ ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರು ಸಾವರ್ಕರ್​ ಅವರಿಗೆ ಗೌರವಾರ್ಥವಾಗಿ ಬರೆದಿರುವ ಪತ್ರವನ್ನು ನೆನಪಿಸಿದ್ದಾರೆ. ಸಾವರ್ಕರ್​ ಬ್ರಿಟಿಷರ ನೆಲದಲ್ಲಿ ಹೋಗಿ ಭಾರತಿಯರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಲು ಹೋರಾಡಿದ್ದಾರೆ. ಆದರೆ ರಾಹುಲ್ ಗಾಂಧಿ ವರ್ಷದ 6 ತಿಂಗಳು ರಜೆಗಾಗಿ ವಿದೇಶಕ್ಕೆ ಹೋಗಿ ದೇಶದ ವಿರುದ್ಧ ವಿದೇಶಿಯರ ಬಳಿ ಸಹಾಯ ಪಡೆಯುತ್ತಾರೆ. ಈ ನಿಟ್ಟಿನಲ್ಲಿ ತಮ್ಮ ಅಜ್ಜಿ ಬರೆದಿರುವ ಪತ್ರವನ್ನು ಓದಬೇಕು. ಇದರಿಂದ ನಿಮ್ಮ ತರ್ಕಕ್ಕೆ ಉತ್ತರ ಸಿಗುತ್ತದೆ ಎಂದು ವಾಗ್ದಾಳಿ ಮಾಡಿದ್ದಾರೆ.ಸಾವರ್ಕರ್​ ಅವರು ರಾಷ್ಟ್ರೀಯ ಸ್ಮಾರಕದ ಕಾರ್ಯದರ್ಶಿ ಪಂಡಿತ್‌ ಬಖಾಲೆ ಅವರಿಗೆ 1980 ಮೇ 20 ರಂದು ಬರೆದ ಪತ್ರದಲ್ಲಿ ಇಂದಿರಾ ಗಾಂಧಿ ಅವರು ಸ್ವಾತಂತ್ರ್ಯ ಚಳವಳಿಗೆ ಸಾವರ್ಕರ್ ಅವರ ಕೊಡುಗೆಯನ್ನು ಉಲ್ಲೇಖಿಸಿದ್ದಾರೆ ಸಾವರ್ಕರ್ ಅವರ ಭಾರತದ ಮೊದಲ ಸ್ವಾತಂತ್ರ್ಯ ಹೋರಾಟ ಪುಸ್ತಕವನ್ನು ಪಂಜಾಬಿಗೆ ಅನುವಾದಿಸಲಾಗಿದೆ. ಸಾವರ್ಕರ್ ಅವರನ್ನು ಭೇಟಿ ಮಾಡಲು ಭಗತ್ ಸಿಂಗ್​ ಸ್ವತಃ ರತ್ನಗಿರಿಗೆ ಹೋಗಿದ್ದರು. ಆದರೆ ಈ ವಿಚಾರವನ್ನು ಮುದ್ರಿಸಲಾಗಿದೆ ಎಂದು ರಾಹುಲ್ ಗಾಂಧಿ ಅವಮಾನಿಸಿದ್ದಾರೆ ಎಂದು ಠಾಕೂರ್ ಹೇಳಿದರುಸಾವರ್ಕರ್​ ದೇಶಪ್ರೇಮ ಮತ್ತು ಧೈರ್ಯದ ಮುಂದೆ ತಲೆಬಾಗಿದ್ದರು. 19230 ಕಾಕಿನಾಡ ಅಧಿವೇಶನದಲ್ಲಿ ಕಾಂಗ್ರೆಸ್ ಕೂಡ ಸಾವರ್ಕರ್ ಅವರ ಪರವಾಗಿ ನಿರ್ಣಯವನ್ನು ಅಂಗೀಕರಿಸಿತ್ತು. ಭಾರತದ ಸ್ವಾತಂತ್ರ್ಯ ಚಳವಳಿಗೆ ಸಾವರ್ಕರ್ ಅವರ ಕೊಡುಗೆಯ ಸ್ಮರಣಾರ್ಥವಾಗಿ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ಅಂಚೆ ಚೀಟಿಯನ್ನು ಸಹ ಬಿಡುಗಡೆ ಮಾಡಿದ್ದರು ಎಂದು ಸಚಿವ ಠಾಕೂರ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ.