ಉಜ್ಜಯನಿ ಜಗದ್ಗುರುಗಳ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ: ರವಿ ಡಿ ಚನ್ನಣ್ಣನವರ್
ಕೊಟ್ಟೂರು ತಾಲ್ಲೂಕಿನ ಶ್ರೀ ಮದ್ ಉಜ್ಜಯನಿ ಸದ್ಧರ್ಮ ಸಿಂಹಾಸನ ಸಂಸ್ಥಾನ ಮಹಾಪೀಠಕ್ಕೆ IPS ಅಧಿಕಾರಿ ರವಿ ಡಿ ಚನ್ನಣ್ಣನವರ್ ಭೇಟಿ ನೀಡಿ ಕ್ಷೇತ್ರನಾಥ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ದರ್ಶನ ಪಡೆದು, ಶ್ರೀ ಮದ್ ಉಜ್ಜಯನಿ ಜಗದ್ಗುರುಗಳವರ ಗೌರವದ ಆಶೀರ್ವಾದವನ್ನು ಸ್ವೀಕರಿಸಿದರು. ಗುರುಗಳ ಆಶೀರ್ವಾದ ಪಡೆದ ನಂತರ ಸೇರಿದ ಭಕ್ತರನ್ನ ಉದ್ದೇಶಿಸಿ ಮಾತನಾಡಿದ ಅವರು ಜಗದ್ಗುರುಗಳವರು ನಾಡಿನ ಒಳಿತಿಗಾಗಿ ಅನೇಕ ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಕಾರ್ಯಕ್ರಮಗಳನ್ನ ನಡೆಸಿಕೊಂಡು ಬರುತ್ತಿದ್ದಾರೆ. ನಾವು ನೀವುಗಳೆಲ್ಲರೂ ಪೂಜ್ಯರ ಮಾರ್ಗದರ್ಶನದಲ್ಲಿ ಶ್ರೀ ಪೀಠದ ಜೊತೆ ಕೈಜೊಡಿಸುವುದರ ಜೊತೆಗೆ ಜಗದ್ಗುರುಗಳವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸೋಣ ಎಂದರು. ಭೇಟಿಯ ಸಂದರ್ಭದಲ್ಲಿ ಕಾನಾಮಡುಗು ಶ್ರೀ ಶರಣಬಸವೇಶ್ವರ ದಾಸೋಹ ಮಠದ ಧರ್ಮಾಧಿಕಾರಿಗಳಾದ ದಾ.ಮ. ಐಮಡಿ ಶರಣಾರ್ಯರು ಸೇರಿದಂತೆ ಶ್ರೀ ಮಠದ ಸದ್ಭಕ್ತರು, ಸಿಬ್ಬಂದಿ ವರ್ಗ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.