ರೈತರ ಸಮಸ್ಯೆಗಿಂತ ಫೋಟೋಶೂಟ್ ಮುಖ್ಯವಾಯಿತೇ ಬಿ.ಸಿ ಪಾಟೀಲರೇ?
ರೈತರ ಸಂವಾದಕ್ಕಿಂತ ಫೆÇೀಟೋಶೂಟ್ನಲ್ಲಿಯೇ ಸಚಿವ ಬಿ.ಸಿ ಪಾಟೀಲ್ ಹೆಚ್ಚು ಇಂಟ್ರೆಸ್ಟ್ ತೋರಿಸಿದ್ದಾರೆ. ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಎಂಬ ಹೆಸರಲ್ಲಿ ಸಚಿವ ಬಿಸಿ ಪಾಟೀಲ್ ಅವರು ಗದಗ ಜಿಲ್ಲೆ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದಲ್ಲಿ ನಡೆದ ಸಚಿವರ ಕಾರ್ಯಕ್ರಮದಲ್ಲಿ ಬರೀ ಫೆÇೀಟೋ ಶೂಟ್ ಮಾಡಿಕೊಂಡಿದ್ದಾರೆ. ಕಾರ್ಯಕ್ರಮದುದ್ದಕ್ಕೂ ಸಚಿವ ಬಿಸಿ ಪಾಟೀಲರನ್ನ ಸುತ್ತುವರೆದ ಬೆಂಗಳೂರಿಂದ ಬಂದಿದ್ದ 10 ಜನ ಫೆÇೀಟೋ ಗ್ರಾಫರ್ಗಳು ಹೊಲಗದ್ದೆಗಳಲ್ಲಿ, ಸೂರ್ಯಕಾಂತಿ ಬೆಳೆದ ಜಮೀನಿನಲ್ಲಿ ಸಚಿವರನ್ನ ನಿಲ್ಲಿಸಿ ಡ್ರೋನ್, ಗಿಂಬಲ್, ಡಿಎಸ್ ಎಲ್ ಆರ್ ಕ್ಯಾಮರಾ ಬಳಸಿ ಫೆÇೀಟೋ ಶೂಟ್ ಮಾಡಿದ್ದಾರೆ.