ಕಾರ್ಯಕರ್ತರು ಯಾರಿಗೆ ಉತ್ತರ ಕೊಡಬೇಕಿತ್ತೋ, ಅವರಿಗೆ ಕೊಟ್ಟಿದ್ದಾರೆ : ಲಕ್ಷ್ಮಿ ಹೆಬ್ಬಾಳ್ಕರ್

ಬೆಳಗಾವಿ,ಡಿ.15-ನಮ್ಮ ಕಾರ್ಯಕರ್ತರು ಯಾರಿಗೆ ಉತ್ತರ ಕೊಡಬೇಕಿತ್ತೋ, ಅವರಿಗೆ ಉತ್ತರ ಕೊಟ್ಟಿದ್ದಾರೆ ಎಂದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.
ಮತದಾರರು ಪ್ರಭುದ್ದರಾಗಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಾವು ನಡೆದುಕೊಂಡ ರೀತಿಯನ್ನು ಜನರು ನೋಡುತ್ತಾರೆ. ಗೆಲ್ಲುವುದು ನಮ್ಮ ಗುರಿಯಾಗಿತ್ತು. ಅದನ್ನು ತಲುಪಿದ್ದೇವೆ. ಯಾರನ್ನು ಸೋಲಿಸಬೇಕು ಎಂದು ಸ್ರ್ಪಧಿಸಲಿಲ್ಲ. ಮೊದಲಿನಿಂದಲೂ ಒಗ್ಗಟ್ಟಿನಿಂದ ಹೋರಾ ಗೆದ್ದಿದ್ದೇವೆ.
ಚುನಾವಣೆ ಎಂದ ಮೇಲೆ ತಂತ್ರ, ಪ್ರತಿತಂತ್ರ ಸಹಜ. ನಾವು ಕೂಡ ಗೆಲುವಿಗಾಗಿ ರಣತಂತ್ರ ರಚಿಸಿದ್ದೇವು. ನಾವು ಕೂಡ ಸಾಕಷ್ಟು ಕೆಲಸ ಮಾಡಿದ್ದೆವು. ಗೆಲುವಿಗಾಗಿ ರಣತಂತ್ರ ರೂಪಿಸಿದ್ದೆವು. ನಮ್ಮ ನಾಯಕರೆಲ್ಲ ಜೊತೆಯಾಗಿ ನಿಂತಿದ್ದರಿಂದ ಗೆಲುವು ಸಾಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.