ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಕುಖ್ಯಾತಿ ಪಡೆದಿದೆ : ಕೆಪಿಸಿಸಿ ಅಧ್ಯಕ್ಷ. ಡಿ.ಕೆ.ಶಿವಕುಮಾರ್ ವಾಗ್ದಾಳಿ

ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಕುಖ್ಯಾತಿ ಪಡೆದಿದೆ : ಕೆಪಿಸಿಸಿ ಅಧ್ಯಕ್ಷ. ಡಿ.ಕೆ.ಶಿವಕುಮಾರ್ ವಾಗ್ದಾಳಿ

ಬೆಳಗಾವಿ : ರಾಜ್ಯ ಬಿಜೆಪಿ ಸರ್ಕಾರ (State BJP government) ಭ್ರಷ್ಟಾಚಾರದಲ್ಲಿ ಕುಖ್ಯಾತಿ ಪಡೆದಿದೆ. ವಿಧಾನಸೌಧದಲ್ಲಿ 40 ಪರ್ಸೆಂಟ್ ಎಂದು ಬೋರ್ಡ್ ಹಾಕಲಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (KPCC President D K Sivakumar) ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಕುಖ್ಯಾತಿ ಪಡೆದಿದೆ. ವಿಧಾನಸೌಧದಲ್ಲಿ ಸರ್ಕಾರಿ ಕೆಲಸ ದೇವರ ಕೆಲಸ ಎಂಬ ಬೋರ್ಡ್ ತೆಗೆದು ಹಾಕಿ 40 ಪರ್ಸೆಂಟ್ ಎಂದು ಬೋರ್ಡ್ ಹಾಕಲಿ ಎಂದು ಕಿಡಿಕಾರಿದ್ದಾರೆ. ಗುತ್ತಿಗೆದಾರರೇ ಕಮಿಷನ್ ಬಗ್ಗೆ ಆರೋಪಿಸಿದ್ರೂ ಬಿಜೆಪಿ ಸಂಸದರು ಏಕೆ ಸುಮ್ಮನಿದ್ದಾರೆ. ಏಕೆ ಮಾನನಷ್ಟ ಮೊಕದ್ದಮೆ ಹಾಕಿಲ್ಲ. ಗುತ್ತಿಗೆದಾರರು ಆರೋಪಿಸಿದ್ದು ಸುಳ್ಳಾದರೆ, ಬಿಜೆಪಿ ಸಂಸದರು ತಾವು ಹಣ ಪಡೆದುಕೊಂಡಿಲ್ಲ ಎಂದು ದಾಖಲೆ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದ್ದಾರೆ.