ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿದ್ದಾರೆ: ಹುಬ್ಬಳ್ಳಿಯಲ್ಲಿ ಪೌರ ಕಾರ್ಮಿಕರ ಗೋಳು

ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿದ್ದಾರೆ: ಹುಬ್ಬಳ್ಳಿಯಲ್ಲಿ ಪೌರ ಕಾರ್ಮಿಕರ ಗೋಳು

ಹುಬ್ಬಳ್ಳಿ, ಡಿಸೆಂಬರ್‌, 06: ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಿರುವುದನ್ನು ಖಂಡಿಸಿ ಪೌರ ಕಾರ್ಮಿಕರು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿ ನಡೆಸಿದ ಪೌರಕಾರ್ಮಿಕರು, ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಲೇ ಕಣ್ಣೀರಿಟ್ಟಿದ್ದಾರೆ.

ರಾಧಾ ಬಾಗಲವಾಡ, ದ್ಯಾಮವ್ವ ಗಬ್ಬೂರ, ರೇಣವ್ವ ನಾಗರಾಳ, ಲಕ್ಷ್ಮವ್ವ ಚಟಗೇರಿ, ಲಕ್ಷ್ಮೀ ಗೋಕಾಕ, ಯಲ್ಲಪ್ಪ ಪಾಳೆ ಪೌರ ಕಾರ್ಮಿಕರು ಕಣ್ಣೀರು ಹಾಕಿದರು. ನಮ್ಮನ್ನು ಕಾನೂನು ಬಾಹಿರವಾಗಿ ಕೆಲಸದಿಂದ ತೆಗೆದು ಹಾಕಲಾಗಿದೆ. ನಾವು ಏನು ತಪ್ಪು ಮಾಡಿದ್ದೇವೆ? ಎಂದು ಪ್ರಶ್ನಿಸುವ ಮೂಲಕ ಪೌರ ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಾರ್ಡ ನಂಬರ್ 70ರಲ್ಲಿ ಸ್ವಚ್ಛತಾ ಕೆಲಸ ಮಾಡುವ ಈ ಗುತ್ತಿಗೆ ಪೌರ ಕಾರ್ಮಿಕರು, ಗುತ್ತಿಗೆದಾರ ವೆಂಕಟೇಶ್ ಮೊರಬದ ಅನ್ಯಾಯ ಮಾಡಿದ್ದಾನೆ ಎಂದು ಆರೋಪ ಮಾಡಿದರು.