ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ನಟ ಲೋಹಿತಾಶ್ವ ಆರೋಗ್ಯದಲ್ಲಿ ಅಲ್ಪ ಚೇತರಿಕೆ

ಬೆಂಗಳೂರು: ಹಿರಿಯ ನಟ ಲೋಹಿತಾಶ್ವ ಅವರ ಆರೋಗ್ಯದಲ್ಲಿ ನಿನ್ನೆಯಿಂದ ಸ್ವಲ್ಪ ಚೇತರಿಕೆ ಕಂಡು ಬಂದಿದೆ. ನಿನ್ನೆ ಅವರು ಕಣ್ಣು ಬಿಟ್ಟಿದ್ದಾರೆ. ಸಹಜವಾಗಿ ಉಸಿರಾಡುತ್ತಿರುವ ಹಿನ್ನೆಲೆಯಲ್ಲಿ ವೆಂಟಿಲೇಟರ್ ರಿಮೂವ್ ಮಾಡಲಾಗಿದೆ.
ಸಹಜವಾಗಿ ಉಸಿರಾಡುತ್ತಿರುವ ಕಾರಣ ವೆಂಟಿಲೇಟರ್ ತೆಗೆಯಲಾಗಿದ್ದು, ಸದ್ಯ ಇನ್ನೆರಡು ದಿನ ಅಬ್ಸರ್ವೇಷನ್ ನಲ್ಲಿ ಇಡಲಾಗುವುದು.
ಹೃದಯಾಘಾತ ಉಂಟಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಿರಿಯ ನಟ ಲೋಹಿತಾಶ್ವ ಅವರು ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಹಲವಾರು ನಟರೊಂದಿಗೆ ಅಭಿನಯಿಸಿದ್ದಾರೆ. 500 ಕ್ಕೂ ಅಧಿಕ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ.