ತಾವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ: ಸುಧಾಕರ್‌ ಹೇಳಿಕೆಗೆ ಡಿಕೆಶಿ ತಿರುಗೇಟು

ತಾವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ: ಸುಧಾಕರ್‌ ಹೇಳಿಕೆಗೆ ಡಿಕೆಶಿ ತಿರುಗೇಟು

ಬೆಂಗಳೂರು: ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾವಾರ ನಡೆದಿದೆ ಎಂದು ಸಚಿವ ಸುಧಾಕರ್ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ. ನಾವು ಸುಧಾಕರ್‌ ಪ್ರತಿಯೊಂದು ಹಗರಣವನ್ನ ಬಿಚ್ಚಿಟ್ಟಿದ್ದೀವಲ್ಲ. ಆಸ್ಪತ್ರೆ ಬೆಡ್​ನಲ್ಲೂ ಹಗರಣ ಆಗಿದೆ.

ತಾವು ತಿಂದು ಕಾಂಗ್ರೆಸ್ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಡಿ.ಕೆ ಶಿವಕುಮಾರ್‌ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರು, ಮಠಮಾನ್ಯಗಳ ಕೋಟ್ಯಂತರ ದುಡ್ಡನ್ನೂ ಹೊಡೆದಿದ್ದೀರಲ್ಲ. ನಾನೂ ಗಂಜಲ-ಗಿಂಜಲ ತಂದು ಕ್ಲೀನ್ ಮಾಡುತ್ತೇನೆ. ಈ ದುಷ್ಟ ಬಿಜೆಪಿ ಸರ್ಕಾರವನ್ನು ರಾಜ್ಯದ ಜನರು ಓಡಿಸಲಿದ್ದಾರೆ. ಬಿಜೆಪಿಯವರ ಸರ್ವೆಯಲ್ಲೇ 60-70 ಸ್ಥಾನ ದಾಟುತ್ತಿಲ್ಲ. ಬಿಜೆಪಿಯಲ್ಲೇ 32 ಗುಂಪಿದೆ. ಮುಖ್ಯಮಂತ್ರಿ ಬಸವರಾಜ ​​ಬೊಮ್ಮಾಯಿ ಅವರೇ ಪ್ಯಾಚಪ್​ ಮಾಡಲು ನಿಮ್ಮ ಸಚಿವರಿಗೆ ಹೇಳಿ ಎಂದು ವಾಗ್ದಾಳಿ ಮಾಡಿದರು.ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡೊಲ್ಲ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ, ಯಡಿಯೂರಪ್ಪ ಏನಾದರು ಮಾತಾಡಲಿ, ಸಿದ್ದರಾಮಯ್ಯ ಅವರು ಪಕ್ಷದ ಹೈಕಮಾಂಡ್ ಹೇಳಿದ ಹಾಗೆ ಕೇಳುತ್ತೇನೆ ಅಂತ ಹೇಳಿದ್ದಾರೆ. ನನಗೆ ಇಚ್ಚೆ ಇದೆ ಹೈಕಮಾಂಡ್ ಹೇಳಿದರೆ ನಿಲ್ಲುತ್ತೇನೆ ಅಂತ ಹೇಳಿದ್ದಾರೆ. ಒಬ್ಬ ನಾಯಕನು ಆಸೆಯೂ ವ್ಯಕ್ತಪಡಿಸಬಾರದಾ? ಮೊದಲು ಯಡಿಯೂರಪ್ಪ, ಅವರ ಮಗನ ಭವಿಷ್ಯ ತೀರ್ಮಾನ ಮಾಡಿಕೊಳ್ಳಲಿ. ಅಮೇಲೆ ನಮ್ಮ ಪಾರ್ಟಿ ಬಗ್ಗೆ ಮಾತಾಡಲಿ ಎಂದು ಕಿಡಿಕಾರಿದ್ದಾರೆ