ಭಾರತದಲ್ಲಿ 24ಗಂಟೆಗಳಲ್ಲಿ 6,317 ಕೋವಿಡ್ ಪ್ರಕರಣ ಪತ್ತೆ,ಒಮಿಕ್ರಾನ್ ಸಂಖ್ಯೆ 213ಕ್ಕೆ ಏರಿಕೆ

ಭಾರತದಲ್ಲಿ 24ಗಂಟೆಗಳಲ್ಲಿ 6,317 ಕೋವಿಡ್ ಪ್ರಕರಣ ಪತ್ತೆ,ಒಮಿಕ್ರಾನ್ ಸಂಖ್ಯೆ 213ಕ್ಕೆ ಏರಿಕೆ

ನವದೆಹಲಿ:ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 6,317 ಕೋವಿಡ್ ಪ್ರಕರಣಗಳು ಪತ್ತೆಯಾಗಿತ್ತು, 318 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ ಕೋವಿಡ್ ನ ಹೊಸ ರೂಪಾಂತರ ತಳಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ 213ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ (ಡಿಸೆಂಬರ್ 22) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

24ಗಂಟೆಗಳ ಅವಧಿಯಲ್ಲಿ ಕೋವಿಡ್ 19 ಸೋಂಕಿನಿಂದ 6,906 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 78,190ಕ್ಕೆ ಇಳಿಕೆಯಾಗಿದೆ. ಇದು 575 ದಿನಗಳ ಕನಿಷ್ಠದ್ದಾಗಿದೆ.

ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಒಟ್ಟು ಸಂಖ್ಯೆ 213ಕ್ಕೆ ಏರಿಕೆಯಾಗಿದೆ. ದೆಹಲಿಯಲ್ಲಿ 57, ಮಹಾರಾಷ್ಟ್ರದಲ್ಲಿ 54 ಪ್ರಕರಣಗಳು ಪತ್ತೆಯಾಗಿದೆ. ಈವರೆಗೆ ಒಮಿಕ್ರಾನ್ ಸೋಂಕಿತ 90 ಮಂದಿ ಆಸ್ಪತ್ರೆಯಿಂದ ಡಿಸ್ ಚಾರ್ಜ್ ಆಗಿದ್ದಾರೆ ಎಂದು ಅಂಕಿಅಂಶದಲ್ಲಿ ತಿಳಿಸಿದೆ.

ದೇಶದಲ್ಲಿ ಒಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಹಾಗೂ ವಾರ್ ರೂಂಗಳು ಮತ್ತು ಸೋಂಕಿನ ಕುರಿತು ನಿಗಾ ವಹಿಸುವಂತೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.