ವಿದೇಶದಲ್ಲಿರುವ ಭಾರತೀಯರು ಅಲ್ಲಿ ಬ್ರ್ಯಾಂಡ್ ಅಂಬಾಸಿಡರ್‍ಗಳು: ಮೋದಿ ಬಣ್ಣನೆ

ಇಂದೋರ್: ಪ್ರವಾಸಿ ಭಾರತೀಯರನ್ನು ವಿದೇಶಿ ನೆಲದಲ್ಲಿ ಭಾರತದ 'ಬ್ರಾಂಡ್ ಅಂಬಾಸಿಡರ್‍ಗಳು' ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ನಗರದಲ್ಲಿ 17ನೇ ಆವೃತ್ತಿಯ ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, 'ನಾನು ಪ್ರವಾಸಿ ಭಾರತೀಯರನ್ನು ವಿದೇಶಿ ನೆಲದಲ್ಲಿ ಭಾರತದ ಬ್ರಾಂಡ್ ಅಂಬಾಸಡರ್ ಮತ್ತು 'ರಾಷ್ಟ್ರ ದೂತ' ಎಂದು ಪರಿಗಣಿಸುತ್ತೇನೆ. ನೀವು ಯೋಗ, ಆಯುರ್ವೇದ, ಗುಡಿ ಕೈಗಾರಿಕೆ, ಕರಕುಶಲ ಮತ್ತು ರಾಗಿ ಉತ್ಪನ್ನಗಳ ಬ್ರಾಂಡ್ ಅಂಬಾಸಿಡರ್‍ಗಳು ಎಂದಿದ್ದಾರೆ.