ಜಾನುವಾರುಗಳಿಗೆ ಚರ್ಮಗಂಟು ಕಾಯಿಲೆ ಭೀತಿ : ಕಾರವಾರದ ಉಳವಿ ಚನ್ನಬಸವೇಶ್ವರ ʼಜಾತ್ರೆಗೆ ಎತ್ತಿನಗಾಡಿ ನಿಷೇಧʼ

ಕಾರವಾರ : ರಾಜ್ಯದಲ್ಲಿ ಜಾನುವಾರುಗಳಿಗೆ ಸಾಂಕ್ರಾಮಿಕ ಚರ್ಮಗಂಟು ರೋಗ ಸಮಸ್ಯೆ ಎದುರಾಗುತ್ತಿದ್ದಂತೆ ಕಾರವಾರದ ಇತಿಹಾಸ ಪ್ರಸಿದ್ಧ ಕರವಾರದ ಉಳವಿ ಚನ್ನಬಸವೇಶ್ವರ ಜಾತ್ರೆಗೆ ಎತ್ತಿನಗಾಡಿ ನಿಷೇಧ ಮಾಡಲಾಗಿದೆ.
ಉಳವಿ ಚನ್ನಬಸವೇಶ್ವರ ಸ್ವಾಮಿ ಜಾತ್ರೆಯೂ ಜನವರಿ 28ರಿಂದ ಫೆ 8ರವರೆಗೆ ನಡೆಯಲಿದ್ದು, ದಿನಗಣನೆ ಆರಂಭವಾಗಿದೆ. ಜಾತ್ರೆಯ ಪ್ರಮುಖ ಆಕರ್ಷಣೆಯ ಕೇಂದ್ರವಾಗಿದ್ದ ಎತ್ತಿನಬಂಡಿಗೆ ವಿಶೇಷ ರೀತಿಯಲ್ಲಿ ಸಿಂಗರಿಸುವುದು ಮಾಡುವುದೇ ಇಲ್ಲಿನ ಪರಂಪರೆಯಾಗಿದೆ. ಉಳವಿ ಚನ್ನಬಸವೇಶ್ವರ ಜಾತ್ರೆ ಸಿದ್ದತೆಯಲ್ಲಿದ್ದ ಜನರಿಗೆ ಉತ್ತರ ಕನ್ನಡ ಜಿಲ್ಲಾಡಳಿತ ನಿಷೇಧ ಹೇರಿದ ಬೆನ್ನಲ್ಲೇ ಭಕ್ತರ ನಿರಾಸೆ ಉಂಟು ಮಾಡಿದೆ.
ಇದೀಗ ಕೊರೊನಾ ಕಡಿಮೆಯಾದ ಬೆನ್ನಲ್ಲೆ ಜಾತ್ರೆ ಸಂಭ್ರಮದಲ್ಲಿದ್ದ ಜನರಿಗೆ ಬೇಸರ ಉಂಟಾಗಿದೆ. ಈ ಜಾತ್ರಮಹೋತ್ಸದಲ್ಲಿ ಪ್ರತಿ ವರ್ಷ ಉಳವಿ ಜಾತ್ರೆಗೆ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಿಂದ ಲಕ್ಷಾಂತರ ಜನರು ಸೇರುತ್ತಾರೆ.