ಶಿವ ಸೈನಿಕರಿಂದ ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿ ಧ್ವಂಸ

ಶಿವ ಸೈನಿಕರಿಂದ ಬಂಡಾಯ ಶಾಸಕ ತಾನಾಜಿ ಸಾವಂತ್ ಕಚೇರಿ ಧ್ವಂಸ

ಮಹಾರಾಷ್ಟ್ರದಲ್ಲಿನ ರಾಜಕೀಯ ಬಿಕ್ಕಟ್ಟು ಈಗ ಮತ್ತೊಂದು ನಾಟಕೀಯ ತಿರುವು ಪಡೆದುಕೊಂಡಿದ್ದು, ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿರುವ ಬಂಡಾಯ ಶಾಸಕರ ನಿವಾಸ ಕಚೇರಿಗಳ ಮುಂದೆ ಶಿವಸೈನಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಪೊಲೀಸರು ಗುವಾಹಟಿಗೆ ತೆರಳಿರುವ ಬಂಡಾಯ ಶಾಸಕರ ನಿವಾಸಗಳಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದು, ಇದರ ಮಧ್ಯೆ ಪುಣೆಯ ಕತ್ರಾಜ್ ಕ್ಷೇತ್ರದ ಶಾಸಕ ತಾನಾಜಿ ಸಾವಂತ್ ಅವರ ಕಚೇರಿಯನ್ನು ಶಿವಸೈನಿಕರು ಧ್ವಂಸಗೊಳಿಸಿದ್ದಾರೆ.

ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಏಕನಾಥ್ ಶಿಂಧೆ, ತಾವು ಸೇರಿದಂತೆ ನಮ್ಮೊಂದಿಗಿರುವ ಶಾಸಕರ ಕುಟುಂಬಗಳಿಗೆ ಪೊಲೀಸ್ ರಕ್ಷಣೆ ನೀಡಬೇಕೆಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿದ್ದು, ಇದಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿರುವ ಸಂಸದ ಸಂಜಯ್ ರಾವತ್, ಭದ್ರತೆ ನೀಡಲು ನಿಮ್ಮ ಕುಟುಂಬ ಸದಸ್ಯರು ಶಾಸಕರಲ್ಲ ಎಂದು ಹೇಳಿದ್ದಾರೆ.