ಮುಂದಿನ ವರ್ಷ ಏಪ್ರಿಲ್‌ನೊಳಗೆ ಇ20 ತೈಲ ಲಭ್ಯ: ಹರ್ದೀಪ್ ಪುರಿ

ಮುಂದಿನ ವರ್ಷ ಏಪ್ರಿಲ್‌ನೊಳಗೆ ಇ20 ತೈಲ ಲಭ್ಯ: ಹರ್ದೀಪ್ ಪುರಿ

ವದೆಹಲಿ: ಇ20 ತೈಲ ದೇಶದ ಆಯ್ದ ತೈಲಕೇಂದ್ರಗಳಲ್ಲಿ 2023, ಏಪ್ರಿಲ್‌ನೊಳಕ್ಕೆ ಸಿಗುವಂತೆ ಮಾಡಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದಕ್ಕಾಗಿ ಪ್ರಾಯೋಗಿಕ ಯೋಜನೆಯೂ ತಯಾರಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ಜೈವಿಕ ಅನಿಲ ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ.

ಶೇ.20 ಎಥೆನಾಲ್‌ ಮತ್ತು ಬಾಕಿ ಪೆಟ್ರೋಲ್‌ ಮಿಶ್ರಿತ ತೈಲವನ್ನು ಇ20 ತೈಲ ಎನ್ನುತ್ತಾರೆ. ಈ ತೈಲಕ್ಕೆ ಪೂರಕವಾಗಿರುವ ವಿವಿಧ ಮಾದರಿಯ ವಾಹನಗಳನ್ನು ಸಿದ್ಧಪಡಿಸಲು ವಾಹನೋದ್ಯಮಿಗಳಿಗೆ ಕೇಂದ್ರ ಎಲ್ಲ ಸಹಕಾರ ನೀಡಲಿದೆ ಎಂದೂ ಅವರು ಭರವಸೆ ನೀಡಿದ್ದಾರೆ.

ವಾಹನೋದ್ಯಮಿಗಳ ಸಂಸ್ಥೆ ಎಸ್‌ಐಎಎಂ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ 1000 ಕೋಟಿ ಲೀಟರ್‌ ಇ20 ತೈಲ ಉತ್ಪಾದಿಸುವ ಗುರಿ ಹೊಂದಿದ್ದೇವೆ. ಇದಕ್ಕೆ ಪೂರಕವಾಗಿ ಬಹುಮಾದರಿಯ ತೈಲಗಳಿಗೆ ಸ್ಪಂದಿಸುವ ವಾಹನಗಳ ತಯಾರಿಗೂ ಉದ್ಯಮಗಳು ಸಜ್ಜಾಗಬೇಕು ಎಂದು ಕರೆ ನೀಡಿದ್ದಾರೆ