ರೆಪೋ ರೇಟ್ ಹೆಚ್ಚಳದಿಂದ ಆಗುವ ಬದಲಾವಣೆಗಳು..

ರೆಪೋ ರೇಟ್ ಹೆಚ್ಚಳದಿಂದ ಆಗುವ ಬದಲಾವಣೆಗಳು..

ರೆಪೊ ದರ ಏರಿಕೆಯಿಂದ ವಿವಿಧ ಸಾಲಗಳ ಮೇಲಿನ ಬಡ್ಡಿ ದರ ಕೂಡ ಹೆಚ್ಚಲಿದೆ. ಠೇವಣಿ ಸೌಲಭ್ಯಗಳ ದರವನ್ನು ಕೂಡ ಹೆಚ್ಚಿಸಲಾಗಿದೆ. 2023ನೇ ಆರ್ಥಿಕ ವರ್ಷದ ಜಿಡಿಪಿ ಬೆಳವಣಿಗೆ ನಿರೀಕ್ಷೆ ಶೇ.7ರಿಂದ ಶೇ.6.8ಕ್ಕೆ ಕುಸಿದಿದೆ. ಆದಾಗ್ಯೂ ಉತ್ಪಾದನೆ, ಮೂಲಸೌಕರ್ಯ ಕ್ಷೇತ್ರದ ಬೆಳವಣಿಗೆ ಆಶಾದಾಯಕವಾಗಿವೆ ಎಂದು RBI ಹೇಳಿದೆ. 'ಕೃಷಿ ಕ್ಷೇತ್ರವು ಚೇತರಿಸಿಕೊಳ್ಳುತ್ತಿದೆ. ನವೆಂಬರ್‌ನಲ್ಲಿ ಭಾರತದ ಉತ್ಪಾದನೆ, ಸೇವೆಗಳ ಪಿಎಂಐ ವಿಶ್ವದಲ್ಲೇ ಗರಿಷ್ಟ. ಮುಂದಿನ ದಿನಗಳಲ್ಲಿ ಹೂಡಿಕೆ ಚಟುವಟಿಕೆಗಳಿಗೆ ಸರ್ಕಾರದಿಂದ ಉತ್ತೇಜನ ದೊರೆಯಲಿದೆ' ಎಂದು ಶಕ್ತಿಕಾಂತ್‌ ದಾಸ್‌ ಹೇಳಿದ್ದಾರೆ.