ಬಿಜೆಪಿ ಗೆಲ್ಲುವುದು ನಿಶ್ಚಿತ - ಕೇಂದ್ರ ಸಚಿವ ನಾರಾಯಣಸ್ವಾಮಿ
ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ನಿಶ್ಚಿತ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ವಿಶ್ಚಾಸ ವ್ಯಕ್ತಪಡಿಸಿದ್ದಾರೆ. ಕೊಪ್ಪಳದಲ್ಲಿ ಮಾತನಾಡಿದ ಅವರು, ಬಿಜೆಪಿಯ ಮೋದಿ ಎಂಬ ಸಂತನ ಆಡಳಿತ, ದೇಶಭಕ್ತಿಯ ಆಡಳಿತದಿಂದಾಗಿ ಜನರು ಬಿಜೆಪಿ ಗೆಲ್ಲಿಸುತ್ತಾರೆ.ಪ್ರಧಾನಿ ಮೋದಿಹಾಗೂ ಮಾಜಿ ಸಿಎಂ. ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಈಗಿನ ಸಿ.ಎಂ. ಬೊಮ್ಮಾಯಿ ಆಡಳಿತ ಚನ್ನಾಗಿ ನಡೆದಿದೆ. ಈ ರಾಜ್ಯ ಕಂಡ ಅಪರೂಪದ ಮುಖ್ಯಮಂತ್ರಿ ಯಡಿಯೂರಪ್ಪ.ಕಾಶ್ಮೀರಕ್ಕೆ 370 ತೆಗೆಯಲು ಆಗುವುದಿಲ್ಲ ಎಂದು ಎಲ್ಲರೂ ಹೇಳಿದ್ದರು.ಮೋದಿ, ಅಮಿತ್ ಷಾ ಪ್ರಯತ್ನದಿಂದ ಆರ್ಟಿಕಲ್ 370 ತೆಗೆಯಲಾಗಿದೆ.ಅದೇ ರೀತಿ ಆರ್ಟಿಕಲ್ 341 ಯಾವುದೇ ಜಾತಿ ತೆಗೆಯುವುದಿಲ್ಲ. ಎಲ್ಲರನ್ನೂ ಒಂದುಗೂಡಿಸಿ ಸದಾಶಿವ ಆಯೋಗದ ವರದಿ ಜಾರಿಯಾಗುತ್ತಿದೆ.ನೂರಕ್ಕೆ ನೂರರಷ್ಟು ಸದಾಶಿವ ಆಯೋಗದ ವರದಿ ನಮ್ಮ ಸರಕಾರದಲ್ಲಿಯೇ ಜಾರಿಯಾಗುತ್ತದೆ.ಉಪಚುನಾವಣೆಯಲ್ಲಿ ಯಾರು ವಯಕ್ತಿಕವಾಗಿ ಮಾತನಾಡಬಾರದು. ಪಕ್ಷ ಹಾಗು ಯೋಜನೆಗಳ ಕುರಿತು ಮಾತನಾಡಬೇಕಿತ್ತು. ಇದು ರಾಜಕಾರಣಕ್ಕೆ ಕಪ್ಪು ಚುಕ್ಕಿ ಎಂದರು. ಕಾಂಗ್ರೆಸ್, ಜೆಡಿಎಸ್ ಆರ್ ಎಸ್ ಎಸ್ ಟೀಕೆ ಮಾಡುತ್ತಿದ್ದಾರೆ.ನಾನು ಮೊದಲು ಸಂಘ ಪರಿವಾರದಿಂದ ಬಂದವನು. ಧರ್ಮವನ್ನು ಹೊಡೆಯುವುದು. ಧರ್ಮವನ್ನು ಇಬ್ಬಾಗ ಮಾಡುವುದನ್ನು ಎರಡೂ ಪಕ್ಷಗಳು ಮಾಡಿವೆ .ಸಿದ್ದರಾಮಯ್ಯ ಬಿಜೆಪಿಯಿಂದ ದಲಿತರಿಗೆ ನ್ಯಾಯ ಸಿಗುವುದಿಲ್ಲ ಎಂಬ ಹೇಳಿಕೆ ಖಂಡಿಸಿದರು.