ಕೊಲ್ಲೂರು-ಕೊಡಚಾದ್ರಿ ರೋಪ್ ವೇ; ಸ್ಥಳ ಪರಿಶೀಲನೆಗೆ ಆಗಮಿಸಿದ ಕೇಂದ್ರ ತಂಡ

2022-23ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದ ಪರ್ವತಮಾಲಾ ಯೋಜನೆಯಡಿ ಕೊಲ್ಲೂರು-ಕೊಡಚಾದ್ರಿ ನಡುವಿನ ರೋಪ್-ವೇ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಯೋಜನೆಯ ಪ್ರಾಥಮಿಕ ಕಾರ್ಯಗಳು ಆರಂಭವಾಗಿದ್ದು, ಕೇಂದ್ರದ ಭೂಸಾರಿಗೆ ಮಂತ್ರಾಲಯದ ತಂಡ ಶಿವಮೊಗ್ಗಕ್ಕೆ ಆಗಮಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಸಂಸದ ಬಿ.ವೈ.ರಾಘವೇಂದ್ರ ಅಧಿಕಾರಿಗಳ ತಂಡವು DPR ಅನುಮೋದನೆಗೆ ಇರುವ ತೊಡಕುಗಳ ಬಗ್ಗೆ ಪರಿಶೀಲಿಸಲು 2 ದಿನದ ಸಮೀಕ್ಷೆ ನಡೆಸುತ್ತಿದ್ದಾರೆ ಎಂದಿದ್ದಾರೆ.