ಧಾರವಾಡ ಜಿಲ್ಲಾ ಕೇಂದ್ರದಲ್ಲಿ ನವೀಕರಿಸಲಾದ ರೈಲ್ವೆ ನಿಲ್ದಾಣ ಇಂದು ಲೋಕಾರ್ಪಣೆ…! ಪ್ರಲ್ಹಾದ್ ಜೋಶಿ ಪ್ರಯತ್ನದಿಂದ ಮೇಲ್ದರ್ಜೆಗೇರಿದ ರೈಲ್ವೆ ನಿಲ್ದಾಣ

ಧಾರವಾಡ : ಧಾರವಾಡ ಜಿಲ್ಲಾ ಕೇಂದ್ರದಲ್ಲಿ ನವೀಕರಿಸಲಾದ ರೈಲ್ವೆ ನಿಲ್ದಾಣ ಇಂದು ಲೋಕಾರ್ಪಣೆಯಾಗಲಿದೆ. ಕೇಂದ್ರ ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಲ್ಹಾದ್ ಜೋಶಿ ಅವರ ಸತತ ಪ್ರಯತ್ನದ ಫಲವಾಗಿ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿದೆ.ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಭಾಗಿಯಾಗಲಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಯೋಗ ಮುದ್ರೆ ಚಿಹ್ನೆ ಕಲಾಕೃತಿ, ಸಾಹಿತಿಗಳು, ಕವಿಗಳ ಚಿತ್ರಗಳು, ಜಾನಪದ ಕಲೆಗಳು, ಆಕರ್ಷಕ ಬಣ್ಣದ ಚಿತ್ತಾರದ ಗೋಡೆಗಳು, ಕನ್ನಡದ ಅಕ್ಷರಗಳು ಹಾಗೂ ಸೀರೆಗಳು ಎಲ್ಲರ ಗಮನ ಸೆಳೆಯುತ್ತಿವೆ.