ರೈಲು ನಿಲ್ದಾಣದಲ್ಲಿ 1.71 ಕೋಟಿ ನಗದು, ಚಿನ್ನದ ಬಿಸ್ಕತ್ತು ಪತ್ತೆ

ರೈಲು ನಿಲ್ದಾಣದಲ್ಲಿ 1.71 ಕೋಟಿ ನಗದು, ಚಿನ್ನದ ಬಿಸ್ಕತ್ತು ಪತ್ತೆ

ಥಾಣೆ, ಅ. 3 – ಮಹಾರಾಷ್ಟ್ರದ ಥಾಣೆ ಜಿಲ್ಲಾಯ ಟಿಟ್ವಾಲಾ ರೈಲು ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬ ಮೂಟೆಯಲ್ಲಿ ಸಾಗಿಸುತ್ತಿದ್ದ 1.71 ಕೋಟಿ ರೂಪಾಯಿ ಮೌಲ್ಯದ ನಗದು ಹಾಗು ಎರಡು ಚಿನ್ನದ ಬಿಸ್ಕತ್ತುಗಳನ್ನು ಆರ್‍ಪಿಎಫ್ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ.

ರೈಲ್ವೆ ನಿಲ್ದಾಣದ ಪ್ಲಾಟ್‍ಫಾರ್ಮ್‍ನಲ್ಲಿ ಅನುಮಾನಾಸ್ಪದವಾಗಿ ಚಲಿಸುತ್ತಿದ್ದ ವ್ಯಕ್ತಿಯನ್ನು ಗಮನಿಸಿ ಆರ್‍ಪಿಎಫ್ ಸಿಬ್ಬಂದಿ ಆತನನ್ನು ವಿಚಾರಿಸಿದ್ದಾರೆ ಅದರೆ ಆತ ತಡಬಡಾಯಿಸಿದಾಗ ಬೆನ್ನ ಹಿಂದೆ ಹೊತ್ತಿಕೊಂಡಿದ್ದ ಮೂಟೆಯೊಂದಿಗೆ ಠಾಣೆಗೆ ಕರೆತಂದಿದ್ದಾರೆ.

ನಂತರ ವಿಚಾರಣೆ ಬಳಿಕ ಆತ ನನ್ನ ಹೆಸರು ಗಣೇಶ್ ಮೊಂಡಲ್ ವ್ಯಾಪಾರಿ ಎಂದು ಹೇಳಿದ ನಂತರ ಮೂಟೆ ತಪಾಸಣೆ ನಡೆಸಿದಾಗ ಅದರಲ್ಲಿ 56 ಲಕ್ಷ ರೂಪಾಯಿ ನಗದು ಮತ್ತು 1,15,16,903 ರೂಪಾಯಿ ಮೌಲ್ಯದ ಎರಡು ಚಿನ್ನದ ಬಿಸ್ಕತ್‍ಗಳನ್ನು ಪತ್ತೆಯಾಯಿತು ಎಂದು ಅಕಾರಿಗಳು ತಿಳಿಸಿದ್ದಾರೆ.

ಹಣ ಮತ್ತು ಚಿನ್ನದ ಮೂಲದ ಬಗ್ಗೆ ಮೊಂಡಲ್ ಸರಿಯಾದ ಮಹಿತಿ ನೀಡುತಿಲ್ಲ,ಆದ ಕಾರಣ ಪ್ರಸ್ತುತ ನಗದು ಮತ್ತು ಚಿನ್ನದ ಬಿಸ್ಕತ್‍ಗಳನ್ನು ಹೆಚ್ಚಿನ ತನಿಖೆಗಾಗಿ ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದ್ದಾರೆ.

ಬಂದಿತ ಆರೋಪಿ ಲಕ್ನೋದಿಂದ ಪುಷ್ಪಕ್ ಎಕ್ಸ್‍ಪ್ರೆಸ್‍ನಲ್ಲಿ ಪ್ರಯಾಣಿಸುತ್ತಿದ್ದ ಟಿಟ್ವಾಲಾ ರೈಲು ನಿಲ್ದಾಣದಲ್ಲಿ ಇಳಿದು ಯಾರಿಗೂ ಕಾಯವಂತ್ತಿದ್ದ ಎಂದು ತಿಳಿದುಬಂದಿದೆ ,ಇದು ಯಾರ ಹಣ ಮತ್ತು ಯಾರಿಗೆ ಕೊಡಲು ಬಂದಿದ್ದ ಎಂಬುದು ತಿನಿಖೆ ನಂತರ ತಿಳಿದುಬರಲಿದೆ.