ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡನಿಗೆ ಚಾಕು ಇರಿತ – ಬುದ್ದಿ ಹೇಳಲು ಹೋದ ಕೈ ಮುಖಂಡ ತೌಸಿಫ್‌ಗೆ ಚಾಕು ಇರಿತ

ಹುಬ್ಬಳ್ಳಿಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡನಿಗೆ ಚಾಕು ಇರಿತ – ಬುದ್ದಿ ಹೇಳಲು ಹೋದ ಕೈ ಮುಖಂಡ ತೌಸಿಫ್‌ಗೆ ಚಾಕು ಇರಿತ

ಬುದ್ದಿ ಹೇಳಲು ಹೋದವನೊಂದಿಗೆ ಜಗಳ ತೆಗೆದು ಚಾಕು ಇರಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಹೌದು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತಡರಾತ್ರಿ ಈ ಒಂದು ಘಟನೆ ನಡೆದಿದ್ದು ಕಾಂಗ್ರೇಸ್ ಪಕ್ಷದ ಮುಖಂಡ ತೌಸಿಫ್ ಗೆ ಚಾಕು ಇರಿಯಲಾಗಿದೆ .
ಬುದ್ದಿ ಹೇಳಲು ಹೋದ ಕೈ ಮುಖಂಡನಿಗೆ ಚಾಕು ಇರಿಯಲಾಗಿದ್ದು ನಗರದ ಸೋನಿಯಾ ಗಾಂಧಿ ನಗರದಲ್ಲಿ ತಡರಾತ್ರಿ ಈ ಒಂದು ಘಟನೆ ನಡೆದಿದ್ದು ಕೈ ಮುಖಂಡ ತೌಸೀಫ್ ಗೆ ಚಾಕು ಇರಿದಿದೆ ಗುಂಪೊಂದು .
ಚಾಕು ಇರಿತಕ್ಕೆ ಒಳಗಾದ ಕೈ ಮುಖಂಡನನ್ನು ಸಧ್ಯ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲು ಮಾಡಲಾಗಿದೆ.ಕೈ ಮುಖಂಡನೊಂದಿಗೆ ಜಗಳ ತಗೆದು ಚಾಕು ಇರದಿದ್ದ ಇಸ್ಮಾಯಿಲ್ ಹಾಗೂ ಸಹಚರರು.ಕೈ ಮುಖಂಡ ತೌಸೀಫ್ ಕಾಲು ಬೆನ್ನಿಗೆ ಚಾಕು ಇರಿದು ಹಲ್ಲೆಯನ್ನು ಮಾಡಲಾಗಿದೆ .
ಚಾಕು ಇರಿದ ಇಸ್ಮಾಯಿಲ್ ಹಾಗೂ ಸಹಚರರನ್ನು ಬೆಂಡಿಗೇರಿ ಪೊಲೀಸರು ಬಂಧಿಸಿದ್ದಾರೆ . ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದೆ .