ಶೀಘ್ರವೇ ʼಕೊರೊನಾ ಮಾತ್ರೆʼ ಬಿಡುಗಡೆ : ಒಂದು ಟ್ಯಾಬ್ಲೆಟ್ ದರ 25-50 ರೂ., ₹1000 ಒಳಗೆ ಚಿಕಿತ್ಸೆ ಪೂರ್ಣ

ಶೀಘ್ರವೇ ʼಕೊರೊನಾ ಮಾತ್ರೆʼ ಬಿಡುಗಡೆ : ಒಂದು ಟ್ಯಾಬ್ಲೆಟ್ ದರ 25-50 ರೂ., ₹1000 ಒಳಗೆ ಚಿಕಿತ್ಸೆ ಪೂರ್ಣ

ಡಿಜಿಟಲ್‌ ಡೆಸ್ಕ್‌ : ಭಾರತದಲ್ಲಿ ಕೊರೊನಾ ಮಾತ್ರೆ ʼವೈರಸ್ಟ್ಯಾಬ್ಲೆಟ್‌ʼಗಳನ್ನ ಶೀಘ್ರ ಬಿಡುಗಡೆ ಮಾಡುವ ಸಾಧ್ಯತೆಯಿದ್ದು, ಸಂಪೂರ್ಣ ಚಿಕಿತ್ಸೆಯ ವೆಚ್ಚ 500-1000 ರೂ. ತಗುಲಿದೆ ಎನ್ನಲಾಗ್ತಿದೆ. ಇದನ್ನ ಅಮೇರಿಕನ್ ಫಾರ್ಮಾಸ್ಯುಟಿಕಲ್ ಕಂಪನಿ ಮೆರ್ಕ್ ಮತ್ತು ರಿಡ್ಜ್ಬ್ಯಾಕ್ ಬಯೋಥೆರಪಿಟಿಕ್ಸ್ ಅಭಿವೃದ್ಧಿಪಡಿಸಿದ್ದು, ಕೊರೊನಾದ ಮೊದಲ ಮೌಖಿಕ ಮಾತ್ರೆಯಾಗಿದೆ.

ಕೊರೊನಾ ವೈರಸ್ಟ್ಯಾಬ್ಲೆಟ್‌ನ ಹೆಸರು ಮೊಲ್ನುಪಿರವಿರ್ ಇದು ಆಂಟಿವೈರಲ್ ಔಷಧವಾಗಿದೆ. ಮಾತ್ರೆ ಪ್ರಾಥಮಿಕ ಮಾಹಿತಿಯ ಪ್ರಕಾರ, ಇದು ಅರ್ಧದಷ್ಟು ಆಸ್ಪತ್ರೆಗೆ ದಾಖಲಾಗುವ ಸಂಖ್ಯೆಯನ್ನ ಕಡಿತಗೊಳಿಸುತ್ತೆ.

ಅಂದ್ಹಾಗೆ, ಕಳೆದ ವಾರ ಬ್ರಿಟನ್ ಔಷಧವನ್ನ ಅನುಮೋದಿಸಿದ ವಿಶ್ವದ ಮೊದಲ ದೇಶವಾಯಿತು. ಕೋವಿಡ್ ಪಾಸಿಟಿವ್ ಮತ್ತು ರೋಗಲಕ್ಷಣಗಳು ಕಾಣಿಸಿಕೊಂಡ ಐದು ದಿನಗಳೊಳಗೆ ಈ ಔಷಧಿಯನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡಲಾಗಿದೆ.

ವರದಿಯ ಪ್ರಕಾರ,ಭಾರತದಲ್ಲಿನ ಸುಮಾರು 700 ರೋಗಿಗಳ ದತ್ತಾಂಶವನ್ನ ಪರಿಶೀಲಿಸುವ ಅಂತಿಮ ಹಂತದಲ್ಲಿರುವ ಕಾರಣ, ನಿಯಂತ್ರಕ ಮಂಡಳಿ ಈ ವಾರದ ಆರಂಭದಲ್ಲಿ ಔಷಧದ ತುರ್ತು ಬಳಕೆಯ ಬಗ್ಗೆ ತನ್ನ ನಿರ್ಧಾರವನ್ನ ಪ್ರಕಟಿಸಬೋದು ಎಂದು ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಮೂಲಗಳು ಬಹಿರಂಗಪಡಿಸಿವೆ.

ಅದ್ರಂತೆ, ಮೌಖಿಕ ಕೋವಿಡ್ -19 ಟ್ಯಾಬ್ಲೆಟ್ʼನ್ನ ಮುಂಬರುವ ವಾರಗಳಲ್ಲಿ ಬಿಡುಗಡೆ ಮಾಡಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತಿ ಟ್ಯಾಬ್ಲೆಟ್‌ಗೆ 25 ರಿಂದ 50 ರೂ.ವರೆಗೆ ಬೆಲೆ ಸಿಗುವ ನಿರೀಕ್ಷೆಯಿದೆ ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಐದು ದಿನಗಳ ಚಿಕಿತ್ಸೆಯ ಅವಧಿಯಲ್ಲಿ ರೋಗಿಯು 15-20 ಮಾತ್ರೆಗಳನ್ನ ತೆಗೆದುಕೊಳ್ಳಬೇಕಾಗುತ್ತದೆ.

ಅಧಿಕಾರಿಯ ಪ್ರಕಾರ, 'ಪ್ರತಿ ರೋಗಿಗೆ ಈ ಔಷಧಿಯ ಕೋರ್ಸ್‌ನ ವೆಚ್ಚವು ಕೇವಲ 500-1000 ರೂ ಆಗಬಹುದೆಂದು ನಾವು ನಿರೀಕ್ಷಿಸುತ್ತೇವೆ. ಇದು ಬಡವರಿಗೂ ಕೈಗೆಟುಕುವ ದರ'ವಾಗಿದೆ ಎಂದ್ರು.