ಕಾಂಗ್ರೇಸ ಪಕ್ಷದ ರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಂಘಟನಾ ತರಬೇತಿ ಶಿಬಿರ ಇಂದಿನಿಂದ ಪ್ರಾರಂಭ

ಮಹಾರಾಷ್ಟ್ರದ ವರ್ದಾ ನಗರದ ಸೇವಾಗ್ರಾಮ ಆಶ್ರಮದಲ್ಲಿ ಜರುಗಿದ ಕಾಂಗ್ರೇಸ ಪಕ್ಷದ ರಾಷ್ಟ್ರೀಯ ದೃಷ್ಟಿಕೋನ ಹಾಗೂ ಸಂಘಟನಾ ತರಬೇತಿ ಶಿಬಿರವನ್ನು ಮಹಾ ಸಚಿವ ಸುನೀಲ್ ಕೇದಾರ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಅನಂತರ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಎಐಸಿಸಿ ಜನರಲ್ ಸೆಕ್ರೆಟರಿ ಹಾಗೂ ಪಂಜಾಬ ಕಾಂಗ್ರೆಸ್ ಉಸ್ತುವಾರಿ ಹರ್ಷವರ್ಧನ ಸತ್ಪಾಲ ಆಧಿಕಾರ ಹಿಡಿಯಲು ರಾಜಕೀಯ ಮಾಡಬಾರದು. ಸಾಮಾನ್ಯರು, ಬಡ ಬಗ್ಗರು ಸುಖ,ಶಾಂತಿ,ನೆಮ್ಮದಿಯಿಂದ ಬದುಕುವಗೋಸ್ಕರ ನಾವು ರಾಜಕೀಯ ಮಾಡಬೇಕು. ಈ ದೇಶ ನಮ್ಮದು ಅಂತ ಸಾಮಾನ್ಯ ಜನರಿಗೆ ಅನ್ನಿಸಬೇಕು. ಇಲ್ಲಿ ನಡೆಯುತ್ತಿರುವ ಪ್ರತಿಯೊಂದು ಬೆಳವಣಿಗೆಗಳು ನಮ್ಮ ಉಜ್ವಲ ಭವಿಷ್ಯಕ್ಕಾಗಿ ಅನ್ನೋ ಭಾವನೆ ಬರಬೇಕು. ಈ ನಿಟ್ಟಿನಲ್ಲಿ ಗಾಂಧೀಜಿಯವರ ಈ ಒಂದು ಪವಿತ್ರ ಭೂಮಿಯಿಂದ ಸರ್ವ ಸೇವಾ ಸಂಘದ ಮೂಲಕ ಇಡೀ ದೇಶಕ್ಕೆ ಕಾಂಗ್ರೇಸನ ವಿಚಾರಧಾರೆಯನ್ನು ಜನರ ಮನದವರೆಗೆ ಮುಟ್ಟಿಸುವ ಅಭಿಯಾನ ಪ್ರಾರಂಭಿಸೋಣ ಎಂದು ಕರೆ ನೀಡಿದರು. ಎಐಸಿಸಿ ಜನರಲ್ ಸೆಕ್ರೆಟರಿ ಹಾಗೂ ಪಂಜಾಬ ಕಾಂಗ್ರೆಸ್ ಉಸ್ತುವಾರಿ ಕಾಂಗ್ರೇಸನ ಈ ಶಿಬಿರಕ್ಕೆ ದೇಶದ ಮೂಲೆ ಮೂಲೆಗಳಿಂದ ಆಗಮಿಸಿದ ಕಾಂಗ್ರೆಸ್ ಮುಖಂಡರನ್ನು ಉದ್ದೇಶಿಸಿ ಜೂಮ್ ಮೀಟಿಂಗ ಮೂಲಕ ಮಾತನಾಡಿದ ಕಾಂಗ್ರೆಸ್ ರಾಷ್ಟೀಯ ಅಧ್ಯಕ್ಷ ರಾಹುಲ್ ಗಾಂಧಿ, ಇವತ್ತು ದೇಶ ಆರ್. ಎಸ್. ಎಸ್ ಹಾಗೂ ಬಿಜೆಪಿ ಕಪಿ ಮುಷ್ಠಿಯಲ್ಲಿದೆ. ಇವರ ಮತೀಯ ಮತ್ತು ಜನ ದ್ವೇಷಿಸುವ ವಿಚಾರಧಾರೆಯನ್ನು ಹೊಂದಿವೆ. ಆದರೆ ಕಾಂಗ್ರೆಸ್ ಪಕ್ಷದ ವಿಚಾರಧಾರೆಗಳು ಜ್ಯಾತ್ಯತೀತ, ಪರಸ್ಪರ ಪ್ರೀತಿ, ಸಹಬಾಳ್ವೆ ಹಾಗೂ ರಾಷ್ಟ್ರೀಯತೆಯಿಂದ ಕೂಡಿದೆ. ಆದರೆ ಇವತ್ತು ಮಾಧ್ಯಮಗಳು ಕೇಂದ್ರ ಸರ್ಕಾರದ ಅನತಿಯಂತೆ ವರ್ತಿಸುತ್ತಿವೆ ಎಂದು ಕಿಡಿ ಕಾರಿದರು.ವಂದೇ ಮಾತರಂ ಗೀತೆ ಈ ಶಿಬಿರಕ್ಕೆ ಇನ್ನಷ್ಟು ಮುದ ನೀಡಿತು. ಶಿಬಿರದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿ ವಂಶಿ ರೆಡ್ಡಿ ಹಾಗೂ ಸಂದೀಪ್ ಮತ್ತು ಕರ್ನಾಟಕದಿಂದ ಪಿ. ಎಚ್ ನೀರಲಕೇರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಂಜಯ ಡೊಂಗರೆ 9ಲೈವ್ ನ್ಯೂಸ್ ಮಹಾರಾಷ್ಟ್ರ.