ಕಂಟೆನರ್ ಲಾರಿ ಟೈರ್ ಬ್ಲಾಸ್ಟ್ ಎಂಟು ಜನರಿಗೆ ಗಂಭೀರ ಗಾಯ

ಗಡಿ ಬೀದರ್ ಜಿಲ್ಲೆಯ ಹುಮನಾಬಾದ ಬೀದರ್-ಕಲ್ಬುರ್ಗಿ ರಾಜ್ಯ ಹೆದ್ದಾರಿ ಮೇಲೆ ಕಂಟೇನರ್ ಲಾರಿ ಟೈರ್ ಬ್ಲಾಸ್ಟ್ ಆಗಿ ಬೀದರ್-ಕಲ್ಬುರ್ಗಿ ಬಸ್ಸ್ ಗೆ ಡಿಕ್ಕಿ ಹೊಡೆದ ಪರಿಣಾಮ 8ಕ್ಕೂ ಅಧಿಕ ಜನರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಜಿಲ್ಲೆಯ ಹುಮನಾಬಾದ್ ತಾಲ್ಲೂಕು ಬಸಂತಪುರ ಬಳಿ ಸಂಭವಿಸಿದೆ. ಘಟನೆ ಸಂಭವಿಸಿದಾಗ ಕಲ್ಬುರ್ಗಿಯಿಂದ ಹುಮನಾಬಾದ್ ಕಡೆಗೆ ಬರುತ್ತಿದ್ದ ಶಾಸಕ ರಾಜಶೇಖರ ಪಾಟೀಲ ತಕ್ಷಣ ಆಂಬುಲೆನ್ಸ್ ವ್ಯವಸ್ಥೆ ಮಾಡಿ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಗಾಯಾಳುಗಳ ಪೈಕಿ ಕೆಲವರು ಬೀದರನಿಂದ ಕಲ್ಬುರ್ಗಿಗೆ ತೆರಳುತಿದ್ದರೆ ಇನ್ನೂ ಕೆಲವರು ಗಡವಂತಿ ಮತ್ತಿತರ ಊರುಗಳಿಗೆ ತೆರಳುತಿದ್ದರು ಎನ್ನಲಾಗಿದೆ.