ನಡು ರೋಡಲ್ಲೇ ಟ್ರಾಫಿಕ್ ಪೊಲೀಸ್, ಬಸ್ ಕಂಡಕ್ಟರ್ ನಡುವೆ ಮಾರಾಮಾರಿ |Belagavi|
ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಮತ್ತು ಸರ್ಕಾರಿ ಬಸ್ ನಿರ್ವಾಹಕನ ನಡುವೆ ಮಾರಾಮಾರಿ ನಡೆದಿದೆ. ಚನ್ನಮ್ಮ ವೃತ್ತದಲ್ಲಿ ಸಿಗ್ನಲ್ ಮಧ್ಯೆ ಚಾಲಕ ನಗರ ಸಾರಿಗೆ ಬಸ್ ನಿಲ್ಲಿಸಿದ್ದ. ಸಿಗ್ನಲ್ ಮಧ್ಯೆ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುತ್ತಿದ್ದ ಚಾಲಕ, ನಿರ್ವಾಹಕರನ್ನು ಸಂಚಾರಿ ಪೊಲೀಸರು ತರಾಟೆಗೆ ತೆಗೆದುಕೊಂಡರು. ಈ ವೇಳೆ ನಿರ್ವಾಹಕ ಟ್ರಾಫಿಕ್ ಮುಖ್ಯಪೇದೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಆಕ್ರೋಶಗೊಂಡು ನಿರ್ವಾಹಕನನ್ನು ಮುಖ್ಯಪೇದೆಯೂ ಕಪಾಳಕ್ಕೆ ಹೊಡೆದಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೇ ಸುಮ್ಮನಾಗದ ನಿರ್ವಾಹಕ ಕೂಡ ಮುಖ್ಯಪೇದೆಯ ಕಪಾಳಕ್ಕೆ ಬಾರಿಸಿದ್ದಾನೆ. ನಂತರ ಇತರ ಪೊಲೀಸರು ಮತ್ತು ಸಾರ್ವಜನಿಕರು ಗಲಾಟೆಯನ್ನು ತಿಳಿಗೊಳಿಸಿದರು.