24ಗಂಟೆಗಳಲ್ಲಿ ಭಾರತದಲ್ಲಿ 8,744 ಹೊಸ ಕೋವಿಡ್ -19 ಪ್ರಕರಣ ದಾಖಲು | Covid-19 | Delhi |

ಇದೀಗ ಎಲ್ಲೆಡೆ ಒಮಿಕ್ರಾನ್ ತಳಿಯ ಕೋವಿಡ್ ವೈರಸ್ ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ಹಿನ್ನೆಲೆ ಭಾರತದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದ್ದು, ಕಳೆದ ಒಂದು ದಿನದಲ್ಲಿ ಭಾರತದಲ್ಲಿ 8,744 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದರ ಮಧ್ಯೆ ಕೋವಿಡ್‍ನಿಂದ 24 ಗಂಟೆಗಳಲ್ಲಿ 621 ಸಾವು ಸಂಭವಿಸಿದ್ದು, ಮಾರಣಾಂತಿಕ ವೈರಸ್‍ನಿಂದ ಸಾವನ್ನಪ್ಪಿದವರ ಸಂಖ್ಯೆ 4,68,554ಕ್ಕೆ ಏರಿಕೆ ಕಂಡಿದೆ. ದೇಶದಲ್ಲಿ ಇದುವರೆಗೆ 3.45 ಕೋಟಿಗೂ ಹೆಚ್ಚು ಸೋಂಕುಗಳು ದಾಖಲಾಗಿವೆ. 9,481 ಚೇತರಿಕೆಯೊಂದಿಗೆ, ಒಟ್ಟು ಚೇತರಿಕೆ 3,39,88,797ಕ್ಕೆ ಏರಿದೆ. ಚೇತರಿಕೆ ದರವು ಪ್ರಸ್ತುತ 98.34 ಪ್ರತಿಶತದಲ್ಲಿದೆ, ಇದು ಮಾರ್ಚ್ 2020ರಿಂದ ಅತ್ಯಧಿಕವಾಗಿದೆ