ಬಿಜೆಪಿ ಹಿರಿಯ ಮುಖಂಡ ರಾಜೇಂದ್ರ ಗೋಖಲೆ ನಿಧನ | Dharwad |
ಬಿಜೆಪಿಯ ಹಿರಿಯ ಮುಖಂಡ ಹಾಗೂ ಸಂಘ ಪರಿವಾರದ ಪ್ರಮುಖ ನಾಯಕ ರಾಜೇಂದ್ರ ಗೋಖಲೆ ಇಂದು ಮಹಾರಾಷ್ಟ್ರದ ಪುಣೆಯಲ್ಲಿ ಅಂಗಾಂಗ ವೈಫಲ್ಯದಿಂದ ನಿಧನ ಹೊಂದಿದ್ದಾರೆ. ಸಂಘ ಪರಿವಾರದ ಸಂಘಟನಾ ಚತುರರು ಹಾಗೂ ಮಾರ್ಗ ದರ್ಶಕರಾಗಿದ್ದ ಗೋಖಲೆ ಅವರು ಬಿಜೆಪಿ ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ. ಮಾಜಿ ಉಪ ಪ್ರಧಾನಿ ಎಲ್. ಕೆ. ಅಡ್ವಾನಿ, ಅವರ ಪಟ್ಟ ಶಿಷ್ಯ ಆಗಿದ್ದರು. 2 ದಶಕಗಳ ಹಿಂದೆ ಗೋಖಲೆ ಅವರ ನಿವಾಸ ಅಂದರೆ ಬಿಜೆಪಿ ಹಾಗೂ ಸಂಘ ಪರಿವಾರದ ಕೇಂದ್ರ ಸ್ಥಾನವಾಗಿತ್ತು. ಕರ್ನಾಟಕದಲ್ಲಿ ಬಿಜೆಪಿಯನ್ನು ಬೇರು ಮಟ್ಟದಿಂದ ಬೆಳೆಸುವಲ್ಲಿ ಯಡಿಯೂರಪ್ಪ ಹಾಗೂ ಅನಂತಕುಮಾರ ಅವರ ಜೊತೆ ಹೆಗಲಿಗೆ ಹೆಗಲು ಕೊಟ್ಟು ನಿಂತವರಲ್ಲಿ ಇವರೂ ಒಬ್ಬರಾಗಿದ್ದರು. ಇಂದು ಅಧಿಕಾರದಲ್ಲಿರುವ ಬಿಜೆಪಿಗೆ ರಾಜೇಂದ್ರ ಗೋಖಲೆ ಅಂತ ನಾಯಕರು ನೆನಪಿಗೆ ಬರದೇ ಇರುವುದು ದುಃಖದ ಸಂಗತಿ