ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಲ್ಲ, ಸಭಾಪತಿ ಹೊರಟ್ಟಿ
ರಾಜ್ಯದಲ್ಲಿ ರಾಜಕೀಯ ಏರುಪೇರು ವಿಚಾರವಾಗಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿದ್ದು, ರಾಜ್ಯದಲ್ಲಿ ಸಿಎಂ ಬದಲು ಆಗೋದಿಲ್ಲ ಎಂದಿದ್ದಾರೆ. ಧಾರವಾಡದಲ್ಲಿ ಮಾತನಾಡಿದ ಅವರು, ಎಲ್ಲವೂ ಹಂಗೆ ಇರುತ್ತದೆ, ರಾಜಕಾರಣದಲ್ಲಿ ಹಂಗೆ ಹವಾ ಬಿಡುತ್ತಿರುತ್ತಾರೆ, ಸಿಎಂ ಒಳ್ಳೆ ಕೆಲಸ ಮಾಡುತಿದ್ದಾರೆ, ಇವರೇ ಸಿಎಂ ಇರುತ್ತಾರೆ ಎಂದು ಹೇಳಿದರು. ಇನ್ನು ಬಿಟ್‌ಕಾಯಿನ್ ವಿಚಾರಣೆ ನಡೆದಿದೆ, ತಪ್ಪಿತಸ್ಥರು ಯಾರಿದ್ದಾರೆ ಅವರ ಮೇಲೆ ಕ್ರಮ ಆಗುತ್ತದೆ ಎಂದ ಹೊರಟ್ಟಿ, ಈ ಬಗ್ಗೆ ಸವಿಸ್ತಾರವಾದ ಚರ್ಚೆ ಆಗಲಿ ಎಂದರು. ರಾಜಕಾರಣದಲ್ಲಿ ಬದಲಾವಣೆ ಆಗೋದಿಲ್ಲ, ಯಾಕೆಂದರೆ ಸಿಎಂ ಈಗ ಬಂದಿದ್ದಾರೆ, ಒಳ್ಳೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ ಹೊರಟ್ಟಿ,ರಾಜ್ಯದಲ್ಲಿ ಯಾವಾಗ ಹಣಕಾಸಿಗೆ ಡೆಪ್‌ಸಿಟ್ ಬರುತ್ತದೆಯೋ, ಆಗ ಉತ್ತರ ಕರ್ನಾಟಕದವರೇ ಸಿಎಂ ಆಗುತ್ತಾರೆ, ಏನೂ ಮಾಡಲಾರದಂತಹ ಪರಿಸ್ಥಿತಿಯಲ್ಲೇ ಈ ಕಡೆದವರು ಸಿಎಂ ಆಗ್ತಾರೆ. ಬೊಮ್ಮಾಯಿ ಬಹಳ ಕಷ್ಟ ಪರಿಸ್ಥಿತಿಯಲ್ಲಿ ಬಂದಿದ್ದಾರೆ, ಅವರು ಇನ್ನಷ್ಟು ದಿನ ಮುಂದವರೆಯಲಿ ಎಂಬುದು ನಮ್ಮ ಆಶಯ. ಸದನದಲ್ಲಿ ಧರಣಿ, ಚೀರಾಟ ಬಂದ್ ಮಾಡಬೇಕಿದೆ ಎಂದ ಅವರು, ಈ ಬಗ್ಗೆ ನಾನು ಪುಸ್ತಕ ಮಾಡಿದ್ದೇನೆ, ಶಿಮ್ಲಾದಲ್ಲಿ ಆಲ್ ಇಂಡಿಯಾ ಸ್ಪೀಕರ್‌ಗಳ ಸಭೆ ಇದೆ, ಅಲ್ಲಿ ಈ ಪುಸ್ತಕ ಮಂಡಿಸಲಿದ್ದೇನೆ ಎಂದ ಅವರು, ಈಗ ಬರುತ್ತಿರುವ ಶಾಸಕರಿಗೆ ಸಮಾಜ, ಜನರ ಬಗ್ಗೆ ಕಾಳಜಿಯೇ ಇಲ್ಲ, ಕಾಳಜಿಯ ಕೆಲಸ ಮಾಡಬೇಕಿದೆ, ಅದನ್ನೇ ನಾನು ಅಜೆಂಡಾದಲ್ಲಿ ಸೇರಸಲಿದ್ದೇನೆ ಎಂದರು.