ಪಾಲಿಕೆ ಚುನಾವಣೆಯಲ್ಲಿ ಮಾಜಿ ಸಚಿವ ಕುಲಕರ್ಣಿ ಇದಿದ್ದರೇ ಕಾಂಗ್ರೆಸಗೆ ಬಹುಮತ ಗ್ಯಾರಂಟಿ ಇಮ್ರಾನ್ ಕಳ್ಳಿಮನಿ

ಅವಳಿನಗರದ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 33,ಸಿಟ್ಟು ಗೆದ್ದು,ನಗೇ ಬಿರಿದ್ದು. ಈ ಸಮಯದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಇದಿದ್ದರೆ, ಸಂಪೂರ್ಣ ಬಹುಮತ ನಮ್ಮದಾಗುತ್ತಿತ್ತು ಎಂದು KPCC ಅಲ್ಪಸಂಖ್ಯಾತರ ವಿಭಾಗ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಕಳವಳ ವ್ಯಕ್ತಪಡಿಸಿದ್ರು. ಇನ್ನು 9live ಜೊತೆಗೆ ಮಾತನಾಡಿದ ಅವರು, ರಾಜ್ಯ ರಾಜಕೀಯದಲ್ಲಿ ತಮ್ಮದೇ ಛಾಪು ಮೂಡಿಸಿಕೊಂಡಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಜಿಲ್ಲೆಗೆ ಪ್ರವೇಶ ನಿರ್ಭಂಧಿಸಿದ ಹಿನ್ನೆಲೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಪಾಲಿಕೆ ಚುನಾವಣೆಯಲ್ಲಿ ಅಲ್ಪ ಪ್ರಮಾಣದ ಹಿನ್ನಡೆ ಆಗಿದೆ. ವಿನಯ ಕುಲಕರ್ಣಿ ಅವರ ಚುನಾವಣೆಯಲ್ಲಿ ಪಾಲ್ಗೊಂಡಿದ್ದರೆ ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಿ, ಅಧಿಕ ಕ್ಷೇತ್ರಗಳನ್ನು ಗೆಲುತ್ತಾ ಸಂಪೂರ್ಣ ಬಹುಮತದಿಂದ ಗೆದ್ದು ಅಧಿಕಾರದ ಗದ್ದುಗೆಯಲ್ಲಿ ಕಾಂಗ್ರೆಸ್ ಪಕ್ಷ ಇರತ್ತಿತ್ತು. ಅದ್ರಂತೆ ಅವಳಿನಗರದ ಜನತೆ ಕಾಂಗ್ರಸ್ ಪಕ್ಷಕ್ಕೆ ಆಶೀರ್ವಾದ ಮಾಡಿ 33,ಸಿಟ್ಟುಗಳನ್ನು ಗೆಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಸಿದ್ದವಾಗಿದೆ. ಅಲ್ಲದೇ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಹಗಲು ರಾತ್ರಿ ಅನ್ನದೆ ದುಡಿದ ಕೈ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ರು....