ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ | Bangalore |
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಬಿ.ಬಿ.ಎಂ.ಪಿ.ಕೇಂದ್ರ ಕಛೇರಿಯ ಅವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಕೋವಿಡ್ ಸಂಕಷ್ಟ ಅವಧಿಯಲ್ಲಿ ಮೃತಪಟ್ಟ ಅಧಿಕಾರಿ/ನೌಕರರಿಗೆ ರೂ.30ಲಕ್ಷ ಪ್ರಧಾನ ಮಂತ್ರಿ ಗರೀಬ್ ಪ್ಯಾಕೇಜ್ ಯೋಜನೆ, ಜೀವಾ ವಿಮೆ, ವಿವಿಧ ವೃಂದದ ತಿರಸ್ಕರಿಸಲಾದ 4,452 ಹುದ್ದೆಗಳು ಮಂಜೂರು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು. ಈ ವೇಳೆ ಬೆಂಗಳೂರು ನಗರ ದಕ್ಷಿಣ ಜಿಲ್ಲಾ ಬಿ.ಜೆ.ಪಿ.ಅಧ್ಯಕ್ಷ ಎನ್.ಆರ್.ರಮೇಶ್, ಅಧ್ಯಕ್ಷ ಅಮೃತ್ ರಾಜ್ ಮತ್ತು ಕಾರ್ಯಾಧ್ಯಕ್ಷ ಹೆಚ್.ವಿ.ಆಶ್ವಥ್ ,ಉಪ ಆಯುಕ್ತ ಲಕ್ಷ್ಮೀ, ಮುಖ್ಯ ಅಭಿಯಂತರು ಬಸವರಾಜ್ ಕಬಾಡೆ, ಜಂಟಿ ನಿರ್ದೇಶಕರು ರಾಘವೇಂದ್ರ ಪ್ರಸಾದ್, ಅಧೀಕ್ಷಕ ಅಭಿಯಂತರುಗಳಾದ ರಾಜೇಶ್, ವಿಜಯಕುಮಾರ್ ಹರಿದಾಸ್ ಮತ್ತು ಸಂಘದ ಪದಾಧಿಕಾರಿಗಳಾದ ಡಿ.ಗಂಗಾಧರ್, ಸೂರ್ಯಕುಮಾರಿ, ಕೆ.ಜಿ.ರವಿ, ಡಿ.ರಾಮಚಂದ್ರ ಮತ್ತು ಕೆ.ಮಂಜೇಗೌಡ, ಎಸ್.ಜಿ.ಸುರೇಶ್, ಕೆ.ನರಸಿಂಹ, ಹೆಚ್.ನಂಜಪ್ಪ, ಕೆ.ಭಾಸ್ಕರ್, ಮಂಜುನಾಥ್, ವಿಭಾ, ಸಂತೋμï ಕುಮಾರ್ ನಾಯಕ್, ರೇಣುಕಾಂಬ, ಅರ್ಮುಗಂ, ಪ್ರವೀಣ್ ಕುಮಾರ್ ಮತ್ತು ಸಾವಿರಾರು ಬಿ.ಬಿ.ಎಂ.ಪಿ.ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.