ವಿಜಯಪುರದಲ್ಲಿ ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ

ವಿಜಯಪುರದಲ್ಲಿ ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ

ವಿಜಯಪುರ: ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಗಂಡ ಸಂಬಂಧಿಯನ್ನೇ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

ಕಾಳಿಕಾ ನಗರ ನಿವಾಸಿ ಈರಯ್ಯಾ ಮಠ ಎಂಬಾತನು ಅದೇ ಬಡಾವಣೆಯ ದಾನಯ್ಯ ಗಣಚಾರಿ ಪತ್ನಿ ವಾಣಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ.

ಇದೇ ಕಾರಣಕ್ಕೆ ಅವಳ ಪತಿ ದಾನಯ್ಯ ಗಣಚಾರಿ ಕೊಲೆ ಮಾಡಿದ್ದಾನೆ. ಈ ಘಟನೆ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಾಳಿಕಾ ನಗರದ ವಾಸಿಯಾಗಿದ್ದ ಈರಯ್ಯಾ ಮಠ ಎಂಬುವವರು ತಮ್ಮ ಪತ್ನಿ ಕವಿತಾಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಗಿದ್ದರು. ಇವರ ಮನೆಯ ಸನೀಹವೇ ಇವರ ಸಂಬಂಧಿಕರಾದ ದಾನಯ್ಯ ಗಣಾಚಾರಿ ಮನೆಯಿತ್ತು. ಡಿಸೆಂಬರ್ 17 ರ ಬೆಳಿಗ್ಗೆ 9 ಗಂಟೆ ಸುಮಾರು ಈರಯ್ಯನ ಮನೆಗೆ ಬಂದ ದಾನಯ್ಯ ಗಣಾಚಾರಿ ಹಾಗೂ ಆತನ ಸಹೋದರ ಸಿದ್ದಯ್ಯಾ ಹಾಗೂ ಸ್ನೇಹಿತ ಸಚಿನ್ ಬಂದು ಈರಯ್ಯಾ ಮಠನನ್ನು ಕರೆದಿದ್ದಾರೆ. ಆಗ ಯಾಕೆ ಎಂದು ಕವಿತಾ ಪ್ರಶ್ನೆ ಮಾಡಿದ್ದಾಳೆ. ಆಗ ಮಾತನಾಡಿದ ದಾನಯ್ಯ ನನ್ನ ಪತ್ನಿ ವಾಣಿಯ ತಂದೆ ಗುರಣ್ಣ ಉರ್ಫ ಗುರಯ್ಯಾ ನ್ಯಾಯ ಪಂಚಾಯತಿ ಮಾಡುವುದು ಇದೆ.ಈರಯ್ಯಾ ನನ್ನ ಪತ್ನಿ ವಾಣಿಯ ಜೊತೆಗೆ ಸಲುಗೆಯಿಂದ ಮಾತನಾಡುತ್ತಾನೆ. ಹೊತ್ತು ಗೊತ್ತು ಇಲ್ಲದೇ ಮೊಬೈಲ್ ಕರೆ ಮಾಡಿ ಮಾತನಾಡುತ್ತಾನೆ. ಈ ವಿಚಾರದ ಕುರಿತು ವಾಣಿ ತಂದೆ ಗುರಣ್ಣ ಮಾತನಾಡುವುದು ಇದೆ ಎಂದಿದ್ದಾರೆ. ನಂತರ ಕವಿತಾ ನಾನೂ ಜೊತೆಗೆ ಬರುತ್ತೇನೆಂದು ಪಟ್ಟು ಹಿಡಿದಿದ್ದಾಳಂತೆ. ಅಸಲಿಗೆ ದಾನಯ್ಯನ ಪತ್ನಿ ವಾಣಿ ಇದೇ ಕೊಲೆಗೀಡಾದ ಈರಯ್ಯಾ ಮಠನ ಸೋದರ ಮಾವನ ಮಗಳು. ಈ ಹಿಂದೆ ದಾನಯ್ಯ ಗಣಾಚಾರಿ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದಾಗ ದಾನಯ್ಯನಿಗೆ ತನ್ನ ಸೋದರ ಮಾವನ ಮಗಳು ವಾಣಿಯನ್ನು ತೋರಿಸಿದ್ದಾನೆ.