ಪೈಲ್ವಾನರಿಗೆ ಊರುಗೋಲು ಕೊಟ್ಟರೆ ಬೇರೆಯವರಿಗೆ ಹೊಡೆಯುತ್ತಾರೆ; ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ರಮೇಶ್ ಕುಮಾರ್ ವ್ಯಂಗ್ಯ

ಪೈಲ್ವಾನರಿಗೆ ಊರುಗೋಲು ಕೊಟ್ಟರೆ ಬೇರೆಯವರಿಗೆ ಹೊಡೆಯುತ್ತಾರೆ; ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ರಮೇಶ್ ಕುಮಾರ್ ವ್ಯಂಗ್ಯ

ಬೆಂಗಳೂರು: ಪಂಚಮಸಾಲಿ ಮೀಸಲಾತಿ ಹೋರಾಟಕ್ಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ವ್ಯಂಗ್ಯವಾಡಿದ್ದು, ಪೈಲ್ವಾನರಿಗೆ ಊರುಗೋಲು ಕೊಡಲು ಹೊರಟಿದ್ದಾರೆ ಎಂದು ಟೀಕಿಸಿದ್ದಾರೆ.

ಅಂಗವೈಕಲ್ಯ ಇದ್ದವರಿಗೆ ಕಾಲು ತೊಂದರೆ ಇದ್ದವರಿಗೆ ನಡೆಯೋಕೆ ಆಗದೇ ಇದ್ದವರಿಗೆ ಒಂದು ಊರುಗೋಲು ಕೊಡಬೇಕು.

ಯಾಕಂದ್ರೆ ಅವರಿಗೆ ಅಂಗವೈಕಲ್ಯ ಇರುತ್ತದೆ. ಪೈಲ್ವಾನರಿಗೆ ಊರುಗೋಲು ಕೊಡಲು ಹೊರಟಿದ್ದಾರೆ. ಪೈಲ್ವಾನರಿಗೆ ಊರುಗೋಲು ಕೊಟ್ಟರೆ ಏನಾಗುತ್ತೆ? ಆ ಊರುಗೋಲಿನಿಂದ ಬೇರೆಯವರಿಗೆಲ್ಲ ಬಾರಿಸುತ್ತಾರೆ ಎಂದು ಹೇಳಿದ್ದಾರೆ.

ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ವ್ಯಂಗವಾಡಿದ ರಮೇಶ್ ಕುಮಾರ್ ಹೇಳಿಕೆಗೆ ರಾಜ್ಯ ರಾಜಕೀಯ ವಲಯದಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿದೆ.