ಭಾರತದ ಟಾಪ್ 10 ನಟರ ಪಟ್ಟಿಯಲ್ಲಿ ಸ್ಥಾನ ಪಡೆದ ಯಶ್: ಅಕ್ಷಯ್ ಕುಮಾರ್ ರನ್ನು ಹಿಂದಿಕ್ಕಿದ ರಾಕಿಂಗ್ ಸ್ಟಾರ್
ಕೆಜಿಎಫ್ ಸಿನಿಮಾದ ಮೂಲಕ ರಾಕಿಂಗ್ ಸ್ಟಾರ್ ಯಶ್ ದೇಶ, ವಿದೇಶದಲ್ಲೂ ಖ್ಯಾತಿ ಘಳಿಸಿದ್ದಾರೆ. ಸದ್ಯ ಯಶ್ ಭಾರತದ ಟಾಪ್ ನಟರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಕೇವಲ ಬಾಲಿವುಡ್ ನಟರು ಮಾತ್ರ ಆ ಸ್ಥಾನಗಳಲ್ಲಿ ಕಾಣಿಸಿಕೊಳ್ತಿದ್ದ ಟಾಪ್ ನಟರ ಪಟ್ಟಿಯಲ್ಲಿ ಇದೀಗ ಸ್ಯಾಂಡಲ್ ವುಡ್ ನಟರು ಸ್ಥಾನ ಪಡೆದುಕೊಳ್ಳುವಂತಾಗಿದೆ.
ಪ್ರತಿ ವರ್ಷವೂ ಕೆಲ ಸಂಸ್ಥೆಗಳು ಭಾರತದ ಟಾಪ್ ನಟರ ಲಿಸ್ಟ್ ಅನ್ನು ಬಿಡುಗಡೆ ಮಾಡುತ್ತವೆ. ಈ ಬಾರಿ ಆಮ್ಯಾರ್ಕ್ಸ್ ಸಂಸ್ಥೆಯು ಟಾಪ್ ನಟರ ಪಟ್ಟಿಯನ್ನು ರಿಲೀಸ್ ಮಾಡಿದ್ದು, ದಳಪತಿ ವಿಜಯ್ (Dalpati Vijay) ಟಾಪ್ 1 ಸ್ಥಾನವನ್ನು ಪಡೆದುಕೊಂಡಿದ್ದರೆ, ಯಶ್ ಗೆ ಟಾಪ್ 5 ಸ್ಥಾನ ಸಿಕ್ಕಿದೆ. ಪ್ರಭಾಸ್ (Prabhas) ಎರಡನೇ ಸ್ಥಾನ, ಜ್ಯೂನಿಯರ್ ಎನ್.ಟಿ.ಆರ್ ಮೂರನೇ ಸ್ಥಾನ ಹಾಗೂ ಅಲ್ಲು ಅರ್ಜುನ್ ನಾಲ್ಕನೇ ಸ್ಥಾನವನ್ನು ಪಡೆಯುವ ಮೂಲಕ ಟಾಪ್ 5 ಪಟ್ಟಿಯಲ್ಲಿ ದಕ್ಷಿಣದವರಿಗೆ ಸ್ಥಾನ ಸಿಕ್ಕಿದೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ರನ್ನು ಯಶ್ ಹಿಂದಿಕ್ಕಿದ್ದಾರೆ. ಅಕ್ಷಯ್ ಕುಮಾರ್ ಆರನೇ ಸ್ಥಾನ ಪಡೆದುಕೊಂಡಿದ್ದಾರೆ. ಲಿವುಡ್ ನ ಖ್ಯಾತ ನಟರು ದೂರವೇ ಉಳಿಯುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಅಲ್ಲಿಗೆ ದಕ್ಷಿಣದವರೇ ಪ್ರಾಬಲ್ಯ ಮೆರೆದಿದ್ದಾರೆ. ಖಾನ್ ಪಡೆಯ ಒಬ್ಬನೇ ಒಬ್ಬ ನಟನೂ ಕೂಡ ಈ ಯಾದಿಯಲ್ಲಿ ಕಾಣಿಸಿಕೊಳ್ಳದೇ ಇರುವುದು ಅಚ್ಚರಿಗೆ ಕಾರಣವಾಗಿದೆ.