ಉಪೇಂದ್ರ ಸಹೋದರನ ಪುತ್ರ ನಟನೆಯ ಸೂಪರ್ ಸ್ಟಾರ್ ಚಿತ್ರದ ನಿರ್ದೇಶಕನ ಮೇಲೆ ಎಫ್‌ಐಆರ್

ಉಪೇಂದ್ರ ಸಹೋದರನ ಪುತ್ರ ನಟನೆಯ ಸೂಪರ್ ಸ್ಟಾರ್ ಚಿತ್ರದ ನಿರ್ದೇಶಕನ ಮೇಲೆ ಎಫ್‌ಐಆರ್
ಟ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ನಟನೆಯ ಸೂಪರ್ ಸ್ಟಾರ್ ಚಿತ್ರದ ನಿರ್ದೇಶಕನಿಗೆ ಕಾನೂನು ಸಂಕಷ್ಟ ಎದುರಾಗಿದೆ. ಬೆಂಗಳೂರು: ನಟ ಉಪೇಂದ್ರ ಅವರ ಸಹೋದರನ ಪುತ್ರ ನಿರಂಜನ್ ಸುಧೀಂದ್ರ ನಟನೆಯ ಸೂಪರ್ ಸ್ಟಾರ್ ಚಿತ್ರದ ನಿರ್ದೇಶಕನಿಗೆ ಕಾನೂನು ಸಂಕಷ್ಟ ಎದುರಾಗಿದೆ.
ವಂಚನೆ, ಪ್ರಾಣ ಬೆದರಿಕೆಯಂತಹ ಗಂಭೀರ ಪ್ರಕರಣಗಳು ಅವರ ಮೇಲೆ ದಾಖಲಾಗಿದ್ದು, ಈ ಚಿತ್ರದ ನಿರ್ಮಾಪಕರು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೋಟ್ಯಾಂತರ ರೂಪಾಯಿ ವಂಚನೆ ಮತ್ತು ತಮಗೆ ನಿರ್ದೇಶಕರು ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ನಿರ್ಮಾಪಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸಿನಿಮಾ ಚೆನ್ನಾಗಿ ಗಳಿಕೆ ಮಾಡಲಿದೆ ಎಂದು ನಿರ್ದೇಶಕ ವೆಂಕಟೇಶ ಬಾಬು 1.10 ಕೋಟಿ ರೂಪಾಯಿ ಹಣ ಪಡೆದಿದ್ದಾರೆ. ಬಳಿಕ ಕಲಾವಿದರಿಗೂ ಹಣ ನೀಡದೆ ಸ್ವಂತಕ್ಕೆ ಬಳಸಿಕೊಂಡು ಸಿನಿಮಾ ಪ್ರಾರಂಭಿಸಿದ್ದಾರೆ. ಇದಲ್ಲದೆ, ತಮಗೆ ಗೊತ್ತಿಲ್ಲದೆ ಸಿನಿಮಾ ಮಾಲೀಕತ್ವವನ್ನು ಬೇರೆಯವರಿಗೆ ಮಾರಿದ್ದಾರೆ ಎಂದು ದೂರಿನಲ್ಲಿ ಮೈಲಾರಪ್ಪ ಉಲ್ಲೇಖಿಸಿದ್ದಾರೆ.ಈ ಬಗ್ಗೆ ನಿರ್ಮಾಪಕ ಮೈಲಾರಪ್ಪ ಅವರ ದೂರಿನಂಂತೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.