ಸ್ಯಾಮ್ ಬಗ್ಗೆ ಹೊಸ ವದಂತಿ; ಸ್ಪಷ್ಟನೆ ನೀಡಿದ ತಂಡ

ನಟಿ ಸಮಂತಾ ಅವರು ಈಗ Myositis ಹೆಸರಿನ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಈ ರೋಗದ ಕಾರಣದಿಂದ ಸಮಂತಾ ಅವರನ್ನು ಕೆಲ ಪ್ರಾಜೆಕ್ಟ್ಗಳಿಂದ ಹೊರಗಿಡಲಾಗಿದೆ ಎಂದು ವರದಿ ಆಗಿತ್ತು. ಇದಕ್ಕೆ ಅವರ ತಂಡದವರು ಬೇಸರದಿಂದಲೇ ಸ್ಪಷ್ಟನೆ ನೀಡಿದ್ದಾರೆ. ‘ಸಮಂತಾ ವಿಶ್ರಾಂತಿಯಲ್ಲಿದ್ದಾರೆ. ಸಂಕ್ರಾಂತಿ ಬಳಿಕ ಬಾಲಿವುಡ್, 'ಖುಷಿ' ಚಿತ್ರದ ಶೂಟಿಂಗ್ನಲ್ಲಿ ಭಾಗಿ ಆಗುತ್ತಾರೆ. ಸಮಂತಾ ಅವರನ್ನು ಸಿನಿಮಾದಿಂದ ಹೊರಗಿಡಲಾಗಿದೆ ಎಂಬ ವಿಚಾರದಲ್ಲಿ ಸತ್ಯವಿಲ್ಲ’ ಎಂದು ಮಹೇಂದ್ರ ಅವರು ಹೇಳಿದ್ದಾರೆ.