ಮಾರ್ಚ್ ತಿಂಗಳ ಮೊದಲ 12 ದಿನಗಳಲ್ಲಿ ಹೆಚ್ಚು ಫೇಮಸ್ ಆದ ಭಾರತದ 10 ನಟರು; ಕನ್ನಡದಿಂದ ಇಬ್ಬರೇ!

ಮಾರ್ಚ್ ತಿಂಗಳ ಮೊದಲ 12 ದಿನಗಳಲ್ಲಿ ಹೆಚ್ಚು ಫೇಮಸ್ ಆದ ಭಾರತದ 10 ನಟರು; ಕನ್ನಡದಿಂದ ಇಬ್ಬರೇ!

ಸಿನಿಮಾ ಕ್ಷೇತ್ರದಲ್ಲಿ ಟ್ವಿಟರ್ ಅತಿದೊಡ್ಡ ಪಾತ್ರವನ್ನು ನಿರ್ವಹಿಸುತ್ತಿದೆ ಎಂದರೆ ತಪ್ಪಾಗಲಾರದು. ಹೌದು, ಸಿನಿಮಾಗಳ ಕುರಿತಾದ ಹಾಗೂ ಯಾವುದೇ ಕಲಾವಿದರ ಕುರಿತಾದ ಸುದ್ದಿಗಳು ಈ ಟ್ವಿಟರ್ ವೇದಿಕೆಯಲ್ಲಿ ಸುಲಭವಾಗಿ ಹಾಗೂ ವೇಗವಾಗಿ ಲಭಿಸಲಿವೆ. ಯಾವುದೇ ಸಿನಿಮಾ ವಿಷಯದ ಸುದ್ದಿಗಳು ಬೇಕೆಂದರೆ ಆ ವಿಷಯದ ಹ್ಯಾಷ್ ಟ್ಯಾಗ್ ಬಳಸಿ ಹುಡುಕಿದರೆ ಸಾಕು ಆ ಕುರಿತಾದ ಸಾಲು ಸಾಲು ಸುದ್ದಿಗಳು ಹಾಗೂ ಮಾಹಿತಿ ಲಭಿಸಿಬಿಡುತ್ತದೆ.

ಇನ್ನು ಸ್ಟಾರ್ ಸಿನಿಮಾಗಳ ವಿಷಯದಲ್ಲಂತೂ ಈ ಟ್ವಿಟರ್ ಅತಿದೊಡ್ಡ ಪಾತ್ರವನ್ನೇ ನಿರ್ವಹಿಸಲಿದೆ ಎನ್ನಬಹುದು. ಹೌದು, ಸ್ಟಾರ್ ನಟರ ಸಿನಿಮಾಗಳು ಸೆಟ್ಟೇರಿದಾಗ ಅಥವಾ ಆ ಚಿತ್ರಗಳ ಕುರಿತ ಯಾವುದೇ ಚಟುವಟಿಕೆಗಳು ನಡೆದಾಗ ಅವುಗಳು ಥಟ್ಟನೆ ಲಭ್ಯವಾಗುವುದು ಇದೇ ಟ್ವಿಟರ್‌ನಲ್ಲಿ. ಅದರಲ್ಲಿಯೂ ಆ ಸ್ಟಾರ್ ನಟರ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಚಿತ್ರಗಳ ಯಾವುದೇ ಅಪ್‌ಡೇಟ್ ಬಂದರೂ ಅವುಗಳನ್ನು ವಿಶೇಷ ಹ್ಯಾಷ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುವ ಮೂಲಕ ಸಂಭ್ರಮಿಸುತ್ತಾರೆ.

ಇದು ಒಂದು ರೀತಿಯ ಕ್ರೇಜ್ ಕೂಡ ಆಗಿದ್ದು, ಇಲ್ಲಿಯೂ ಯಾವ ನಟನ ಬಗ್ಗೆ ಹೆಚ್ಚು ಹ್ಯಾಷ್‌ಟ್ಯಾಗ್‌ಗಳು ಟ್ವೀಟ್ ಆಗಿವೆ ಎಂದು ಅಳೆದು ದಾಖಲೆಗಳ ಬಗ್ಗೆ ಮಾತನಾಡಲಾಗುತ್ತದೆ. ಹೀಗೆ ಟ್ವಟರ್‌ನ ಟ್ವೀಟ್‌ಗಳಲ್ಲಿ ಯಾವ ನಟನ ಹೆಸರು ಹೆಚ್ಚು ಮೆನ್ಷನ್ ಆಗುತ್ತದೆಯೋ ಆ ನಟನನ್ನು ಟ್ರೆಂಡಿಂಗ್‌ನಲ್ಲಿರುವ ನಟ ಹಾಗೂ ಫೇಮಸ್ ನಟ ಎಂದೆಲ್ಲಾ ಕರೆಯುತ್ತಾರೆ. ಹೀಗೆ ಈ ತಿಂಗಳ 1ರಿಂದ 12ರವರೆಗೆ ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಆದ ಭಾರತದ ಹತ್ತು ನಟರ ಪಟ್ಟಿ ಬಿಡುಗಡೆಯಾಗಿದ್ದು, ಈ ದಿನಗಳಲ್ಲಿ ಫೇಮಸ್ ಆದ ಆ ಹತ್ತು ನಟರು ಯಾರು ಎಂಬ ಮಾಹಿತಿ ಈ ಕೆಳಕಂಡಂತಿದೆ.

1. ಜೂನಿಯರ್ ಎನ್‌ಟಿಆರ್

2. ರಾಮ್ ಚರಣ್

3. ಶಾರುಖ್ ಖಾನ್

4. ಸೂರ್ಯ

5. ಪ್ರಭಾಸ್

6. ಅಲ್ಲು ಅರ್ಜುನ್

7. ಯಶ್

8. ವಿಜಯ್

9. ಕಿಚ್ಚ ಸುದೀಪ್

10. ಮಹೇಶ್ ಬಾಬು

ಸದ್ಯ ಈ ತಿಂಗಳ ಮೊದಲ ಹನ್ನೆರಡು ದಿನಗಳಲ್ಲಿ ಆರ್ ಆರ್ ಆರ್ ಆಸ್ಕರ್‌ನಲ್ಲಿ ನಾಟು ನಾಟು ಹಾಡಿಗಾಗಿ ಬೆಸ್ಟ್ ಒರಿಜಿನಲ್ ಸಾಂಗ್ ಪ್ರಶಸ್ತಿ ಗೆದ್ದದ್ದಕ್ಕಾಗಿ ರಾಮ್ ಚರಣ್ ಹಾಗೂ ಜೂನಿಯರ್ ಎನ್‌ಟಿಆರ್ ಕುರಿತು ಟ್ವಿಟರ್‌ನಲ್ಲಿ ಹೆಚ್ಚೆಚ್ಚು ಟ್ವೀಟ್‌ಗಳು ದಾಖಲಾಗಿದ್ದು, ಈ ಇಬ್ಬರು ಸ್ಟಾರ್ ನಟರು ಟಾಪ್ ಸ್ಥಾನಗಳಲ್ಲಿದ್ದಾರೆ. ಇನ್ನು ಪಠಾಣ್ ಚಿತ್ರದ ಕುರಿತು ಹೆಚ್ಚು ಟ್ವೀಟ್‌ಗಳು ಹಾಗೂ ಜವಾನ್ ಚಿತ್ರದ ದೃಶ್ಯವೊಂದು ಲೀಕ್ ಆದ ಕಾರಣ ಶಾರುಖ್ ಖಾನ್ ಹೆಚ್ಚು ಟ್ವೀಟ್‌ಗಳಲ್ಲಿ ಮೆನ್ಷನ್ ಆಗಿದ್ದಾರೆ.

ಇನ್ನು ಮಾರ್ಚ್ 1ರಿಂದ 12ರವರೆಗೆ ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಆದ ಭಾರತದ ನಟರ ಪಟ್ಟಿ ಹೀಗಿದ್ದರೆ, ದಕ್ಷಿಣ ಭಾರತದ ನಟರ ಪ್ರತ್ಯೇಕ ಪಟ್ಟಿಯೂ ಸಹ ಬಿಡುಗಡೆಗೊಂಡಿದೆ. ಹಾಗಿದ್ದರೆ ಈ ಅವಧಿಯಲ್ಲಿ ಟ್ವಿಟರ್‌ನಲ್ಲಿ ಅತಿಹೆಚ್ಚು ಮೆನ್ಷನ್ ಆದ ದಕ್ಷಿಣ ಭಾರತದ ಹತ್ತು ನಟರು ಯಾರು ಎಂಬ ಮಾಹಿತಿ ಈ ಕೆಳಕಂಡಂತಿದೆ..

1. ಜೂನಿಯರ್ ಎನ್‌ಟಿಆರ್

2. ರಾಮ್ ಚರಣ್

3. ವಿಜಯ್

4. ಪ್ರಭಾಸ್

5. ಅಲ್ಲು ಅರ್ಜುನ್

6. ಯಶ್

7. ಪವನ್ ಕಲ್ಯಾಣ್

8. ಅಜಿತ್ ಕುಮಾರ್

9. ಮಹೇಶ್ ಬಾಬು

10. ದರ್ಶನ್