71 ಸಂಸದರ ಸಂಪತ್ತು ಶೇ.286ರಷ್ಟು ವೃದ್ಧಿ: ಅಗ್ರಸ್ಥಾನದಲ್ಲಿ ರಾಜ್ಯದ ಬಿಜೆಪಿ ಸಂಸದರು!

2009ರಿಂದ ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾದ ಜನಪ್ರತಿನಿಧಿಗಳ ಸಂಪತ್ತಿನಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಕರ್ನಾಟಕದ ಬಿಜೆಪಿ ಸಂಸದ ರಮೇಶ್ ಜಿಗಜಿಣಗಿ ಮೊದಲ ಸ್ಥಾನದಲ್ಲಿದ್ಧಾರೆ.
ರಮೇಶ್ ಚಂದಪ್ಪ ಜಿಗಜಿಣಗಿ ಆಸ್ತಿ 2009ರಲ್ಲಿ 1.18 ಕೋಟಿ ರೂ.
ಬಿಜಾಪುರದಿಂದ ಲೋಕಸಭೆಗೆ ಆಯ್ಕೆಯಾಗಿದ್ದ ಜಿಗಜಿಣಗಿ 2016ರಿಂದ 19ರ ಅವಧಿಯಲ್ಲಿ ಕೇಂದ್ರದಲ್ಲಿ ಕುಡಿಯುವ ನೀರು ಮತ್ತು ಒಳಚರಂಡಿ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಎರಡು ಅವಧಿಯಲ್ಲಿ ಅತೀ ಹೆಚ್ಚು ಸಂಪತ್ತು ವೃದ್ಧಿಸಿಕೊಂಡು ಎರಡನೇ ಸ್ಥಾನದಲ್ಲಿರುವ ಸಂಸದ ಬಿಜೆಪಿಯ ಪಿಸಿ ಮೋಹನ್. ಇವರು ಕೂಡ ಕರ್ನಾಟಕವರೇ ಆಗಿದ್ದು, ಬೆಂಗಳೂರು ಕೇಂದ್ರದಿಂದ ಆಯ್ಕೆಯಾಗಿದ್ದಾರೆ.
ಪಿಸಿ ಮೋಹನ್ ಅವರ ಆಸ್ತಿ 2009ರಲ್ಲಿ ಚುನಾವಣಾ ಆಯೋಗಕ್ಕೆ ನೀಡಿದ ಸ್ವಯಂಘೋಷಿತ ಆಸ್ತಿ 5.37 ಕೋಟಿ ರೂ. ಆಗಿತ್ತು ಆದರೆ 10 ವರ್ಷದಲ್ಲಿ 75.55 ಕೋಟಿ ರೂ.ಗೆ ಏರಿಕೆಯಾಗಿದ್ದು, ಶೇ.1309ರಷ್ಟು ಜಿಗಿತ ಕಂಡಿದೆ.
ಉತ್ತರ ಪ್ರದೇಶದ ಪಿಲ್ ಬಿಟ್ ಕ್ಷೇತ್ರದಿಂದ ಬಿಜೆಪಿ ಸಂಸದರಾಗಿರುವ ವರುಣ್ ಗಾಂಧಿ ಆಸ್ತಿ 2009ರಲ್ಲಿ 4.92 ಕೋಟಿ ರೂ. ಇದ್ದು 2019ರಲ್ಲಿ 60.32 ಕೋಟಿಗೆ ಏರಿಕೆಯಾಗಿದೆ.
ಸಂಸದರ ಆಸ್ತಿ ಕಳೆದ 10 ವರ್ಷದಲ್ಲಿ ಸರಾಸರಿ ವರ್ಷಕ್ಕೆ 17.66 ಕೋಟಿ ರೂ.ಗೆ ಏರಿಕೆಯಾಗಿದ್ದು ಒಟ್ಟಾರೆ ಶೇ.286ರಷ್ಟು ಸಂಪತ್ತು ವೃದ್ಧಿಸಿದೆ.