ಮೈಸೂರು ಅರಮನೆ ಕೋಟೆಯ ಗೋಡೆ ಕುಸಿತ

ಬೆಂಗಳೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಯ ಕೋಟೆ ಗೋಡೆ ಕುಸಿದಿದೆ. ಕೋಟೆ ಮಾರಮ್ಮ ದೇಗುಲ ಹಾಗೂ ಜಯಮಾರ್ತಾಂಡ ದ್ವಾರದ ಮಧ್ಯದಲ್ಲಿ ಬರುವ ಕೋಟೆಯ ಗೋಡೆ ಕುಸಿದಿದ್ದು, ನೂರಕ್ಕೂ ಹೆಚ್ಚು ಹಳೇ ಕಾಲದ ಕಲ್ಲುಗಳು ನೆಲಕ್ಕೆ ಉರುಳಿವೆ. ಈ ಭಾಗಕ್ಕೆ ಸದ್ಯ ಟಾರ್ಪಾಲ್ ಹೊದಿಸಲಾಗಿದೆ.
ಈ ಕೋಟೆಗೆ ಐತಿಹಾಸಿಕ ಇತಿಹಾಸವಿದೆ. ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ಅಂದಿನ ರಾಜರು ಮೈಸೂರು ಅರಮನೆ ಸುತ್ತಲೂ ಕೋಟೆಯನ್ನ ನಿರ್ಮಿಸಿದ್ದರು.