ಕೆ. ಆರ್.ಪೇಟೆಯಲ್ಲಿ ಮೇಕೆ ತಿನ್ನಲು ಬಂದ ಚಿರತೆ ಕೊಟ್ಟಿಗೆಯಲ್ಲಿ ಬಂಧಿ

ಕೆ. ಆರ್.ಪೇಟೆಯಲ್ಲಿ ಮೇಕೆ ತಿನ್ನಲು ಬಂದ ಚಿರತೆ ಕೊಟ್ಟಿಗೆಯಲ್ಲಿ ಬಂಧಿ

ಮಂಡ್ಯ   ಕೆ.ಆರ್ ಪೇಟೆ ತಾಲೂಕಿನ ಅಕ್ಕಿ ಹೆಬ್ಬಾಳು ಹೋಬಳಿಯ ಮೂಡನಹಳ್ಳಿ ಗ್ರಾಮದಲ್ಲಿ ಚಿರತೆ ಸೆರೆಯಾಗಿದೆ.

ಮೇಕೆ ತಿನ್ನಲು ಬಂದಿದ್ದ ಚಿರತೆಯನ್ನು ನೋಡಿದ ಮನೆಯ ಮಂದಿ ಕೊಟ್ಟಿಗೆ ಬಾಗಿಲು ಹಾಕಿ ಚಿರತೆಯನ್ನು ಲಾಕ್ ಮಾಡಿದ್ದು ಬಳಿಕ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಚಿರತೆ ಗ್ರಾಮದ ನಿಂಗೇಗೌಡ ಎಂಬುವರ ಮನೆಯ ಕೊಟ್ಟಿಗೆಗೆ ನುಗ್ಗಿದೆ.

ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿದ್ದು, ಇದೇ ವೇಳೆ ಚಿರತೆಯನ್ನು ಕಾಣಲು ಭಾರೀ ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆದಿದ್ದಾರೆ. ತಾಲ್ಲೂಕಿನಲ್ಲಿ ಚಿರತೆ ಹಾವಳಿ ಹೆಚ್ಚುತ್ತಲೇ ಇದ್ದು ಜನವರಿ 22ರಂದು ಸಂತೇಬಾಚಹಳ್ಳಿ ಹೋಬಳಿಯ ಬಿ. ಗಂಗನಹಳ್ಳಿ ಗ್ರಾಮದಲ್ಲಿ ರೈತರೊಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದರು. ಜಮೀನಿನ ಕೆಲಸದ ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದ ರೈತ ಮಾಯಪ್ಪ (37) ಎಂಬುವರ ಮೇಲೆ ಚಿರತೆ ದಾಳಿ ಮಾಡಿ ಕೊಂದು ಹಾಕಿತ್ತು.