ವಿಪರೀತ ಕಾರು, ಬೈಕ್ ಕ್ರೇಜ್ ಹೊಂದಿದ್ದ ಶಾಸಕರ ಪುತ್ರ : ಕೆಲವೇ ತಿಂಗಳ ಅಂತರದಲ್ಲಿ ಪತ್ನಿ, ಮಗ- ಭಾವೀ ಸೊಸೆ ಕಳೆದುಕೊಂಡ ಹೊಸೂರು ಶಾಸಕ ಪ್ರಕಾಶ

ವಿಪರೀತ ಕಾರು, ಬೈಕ್ ಕ್ರೇಜ್ ಹೊಂದಿದ್ದ ಶಾಸಕರ ಪುತ್ರ : ಕೆಲವೇ ತಿಂಗಳ ಅಂತರದಲ್ಲಿ ಪತ್ನಿ, ಮಗ- ಭಾವೀ ಸೊಸೆ ಕಳೆದುಕೊಂಡ ಹೊಸೂರು ಶಾಸಕ ಪ್ರಕಾಶ

ವಿಪರೀತ ಕಾರು, ಬೈಕ್ ಕ್ರೇಜ್ ಹೊಂದಿದ್ದ ಶಾಸಕರ ಪುತ್ರ : ಕೆಲವೇ ತಿಂಗಳ ಅಂತರದಲ್ಲಿ ಪತ್ನಿ, ಮಗ- ಭಾವೀ ಸೊಸೆ ಕಳೆದುಕೊಂಡ ಹೊಸೂರು ಶಾಸಕ ಪ್ರಕಾಶ

ಬೆಂಗಳೂರು: ನಗರದ ಕೋರಮಂಗಲ ಬಳಿ ಕಳೆದ ಮಧ್ಯರಾತ್ರಿ ಸಂಭವಿಸಿದ ಭೀಕರ ಆಡಿ ಕಾರು ಅಪಘಾತದಲ್ಲಿ ತಮಿಳುನಾಡು ಹೊಸೂರಿನ ಡಿಎಂಕೆ ಶಾಸಕ ವೈ. ಪ್ರಕಾಶ್ ಅವರ ಏಕೈಕ ಪುತ್ರ ಕರುಣಾಸಾಗರ್ ಮತ್ತು ಆತನ ಭಾವಿ ಪತ್ನಿ ಬಿಂದು ಸೇರಿದಂತೆ ಏಳು ಜನ ಮೃತಪಟ್ಟಿದ್ದಾರೆ.
ಶಾಸಕರ ಪುತ್ರ ಕರುಣಾಸಾಗರ್ ಉದ್ಯಮ ನಡೆಸುತ್ತಿದ್ದ. ಕಾರು, ಬೈಕ್ ಕ್ರೇಜ್ ವಿಪರೀತವಾಗಿತ್ತು ಎಮದು ಹೇಳಲಾಗಿದೆ.
ಶಾಸಕರ ಪುತ್ರ, ಒಬ್ಬನೇ ಮಗ, ಐಷಾರಾಮಿ ಬದುಕು, ಹೀಗಾಗಿ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಐಷಾರಾಮಿ ದುಬಾರಿ ಕಾರು, ಬೈಕ್ ಗಳನ್ನು ರೈಡ್ ಮಾಡುವುದು, ಫೋಟೋಶೂಟ್ ಮಾಡಿಸುವ ಹುಚ್ಚು ಕರುಣಾಸಾಗರ್ ಗೆ ಇತ್ತು. ಕರುಣ ಸಾಗರ ಬಳಿ ಹಲವು ಕಾರು ಮತ್ತು ಬೈಕ್ ಸಂಗ್ರಹವಿತ್ತು ಎಂದು ತಿಳಿದುಬಂದಿದೆ. ಕೊನೆಗೂ ಅದರಿಂದಲೇ ಸಾವು ಸಂಭವಿಸುವಂತಾಗಿದೆ. ನಿನ್ನೆ (ಸೋಮವಾರ) ಮಧ್ಯರಾತ್ರಿ ಅಪಘಾತವಾಗುವುದಕ್ಕೆ ಮೊದಲು ತನ್ನ ಇನ್ಸ್ಟಾಗ್ರಾಂನಲ್ಲಿ ಕಾರು ಡ್ರೈವಿಂಗ್ ನ ಕೆಲವೇ ಸೆಕೆಂಡುಗಳ ವಿಡಿಯೊವೊಂದನ್ನು ಅಪ್ ಲೋಡ್ ಮಾಡಿದ್ದರು ಕರುಣ ಸಾಗರ.

ಇವರು ಚಲಾಯಿಸುತ್ತಿದ್ದ ಆಡಿ ಕಾರು ಬಹಳ ವೇಗವಾಗಿ ಸಾಗಿ ಫೂಟ್​ಪಾತ್ ತಡೆಗೋಡೆ ಗುದ್ದಿ ಬಳಿಕ ಬ್ಯಾಂಕ್ ಕಟ್ಟಡಕ್ಕೆ ಗುದ್ದಿ ಅಪಘಾತವಾಗಿದೆ. ಕಾರಿನಲ್ಲಿದ್ದ ಎಲ್ಲಾ ಏಳು ಮಂದಿಯೂ ದಾರುಣ ಸಾವು ಕಂಡಿದ್ಧಾರೆ. ತಡರಾತ್ರಿ ಈ ಅಪಘಾತ ಸಂಭವಿಸುವುದಕ್ಕೂ ಮುನ್ನ ಪೊಲೀಸರ ಕಣ್ಣಿಗೆ ಈ ಕಾರು ಬಿದ್ದಿತ್ತಂತೆ. ರಾತ್ರಿ 10:35ರ ಸುಮಾರಿಗೆ ಅತಿವೇಗವಾಗಿ ಸಾಗುತ್ತಿದ್ದ ಈ ಕಾರನ್ನು ಕೋರಮಂಗಲದ ಅಪೋಲೋ ಆಸ್ಪತ್ರೆ ಬಳಿಯ ಚೆಕ್ ಪೋಸ್ಟ್ ಬಳಿ ಪೊಲೀಸರು ತಡೆದಿದ್ದರು. ಈ ಘಟನೆಯ ವಿವರ ನೀಡಿದ ಕಾನ್ಸ್​ಟೆಬಲ್ ಪ್ರಶಾಂತ್, ತಾವು ಯಾಕೆ ರ್ಯಾಷ್ ಡ್ರೈವಿಂಗ್ ಮಾಡಿದಿ ಎಂದು ಪ್ರಶ್ನಿಸಿದ್ದರಂತೆ. ಇದೇ ರಸ್ತೆಯಲ್ಲಿ ತಮ್ಮ ಮನೆ ಇದೆ. ಎಲ್ಲರೂ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಕರುಣ್ ಸಾಗರ್ ತಮಗೆ ತಿಳಿಸಿದರು. ನೈಟ್ ಕರ್ಫ್ಯೂ ಇದೆ. ಹುಷಾರಾಗಿ ನಿಧಾನವಾಗಿ ಹೋಗಿ ಎಂದು ತಾನು ಅವರಿಗೆ ತಿಳಿಹೇಳಿದ್ದಾಗಿ ಪೊಲೀಸ್ ಕಾನ್ಸ್​ಟೆಬಲ್ ಪ್ರಶಾಂತ್ ತಿಳಿಸಿದ್ದಾರೆ ಎಂದು ನ್ಯೂಸ್‌ 18 ಕನ್ನಡ  ವರದಿ ಮಾಡಿದೆ.

ಸದ್ಯ ಬೆಂಗಳೂರಿನ ಸೇಂಟ್‌ ಜಾನ್ ಆಸ್ಪತ್ರೆಯಲ್ಲಿ ಮೃತರ ಮರಣೋತ್ತರ ಪರೀಕ್ಷೆ ಮುಗಿದು ಶವಗಳನ್ನು ಹಸ್ತಾಂತರಿಸಲಾಗುತ್ತಿದೆ. ಶಾಸಕ ವೈ ಪ್ರಕಾಶ್ ತಮ್ಮ ನಿವಾಸಕ್ಕೆ ಆಗಮಿಸುತ್ತಿದ್ದಾರೆ.