ಕನ್ನಡಿಗರಿಗೆ ಬಿಗ್ ಶಾಕ್ : 24,000 ಪೇದೆಗಳ ನೇಮಕಾತಿಗೆ ಇಂಗ್ಲಿಷ್, ಹಿಂದಿಯಲ್ಲೇ ಪರೀಕ್ಷೆ ನಿಗದಿ!

ಬೆಂಗಳೂರು : ಕೇಂದ್ರ ಸರ್ಕಾರವು ಕನ್ನಡಿಗರಿಗೆ ಮತ್ತೊಂದು ಬಿಗ್ ಶಾಕ್ ನೀಡಿದ್ದು, ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿವಿಧ ಭದ್ರತಾ ಪಡೆಗಳಲ್ಲಿ 24,000 ಕ್ಕೂ ಹೆಚ್ಚು ಕಾನ್ಸ್ ಟೇಬಲ್ ಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದ್ದು, ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿ ಬರುವ ವಿವಿಧ ಭದ್ರತಾ ಪಡೆಗಳಲ್ಲಿ 24,000 ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದು, ಈ ಮೂಲಕ ಕನ್ನಡಿಗರು ಮತ್ತು ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಬಿಗ್ ಶಾಕ್ ನೀಡಿದೆ.
10 ನೇ ತರಗತಿ ಕನಿಷ್ಟ ವಿದ್ಯಾರ್ಹತೆ ಇರುವ ಪರೀಕ್ಷೆಯಲ್ಲಿ ಕೇವಲ ಎಸ್‌ಎಸ್ ಎಲ್ ಸಿ ಪಾಸಾದವರು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ಬರೆಯಬೇಕು ಅಂದರೆ ಹೇಗೆ ಸಾಧ್ಯ. ಕನ್ನಡದಲ್ಲಿ ಏಕೆ ಪರೀಕ್ಷೆ ನಡೆಸುತ್ತಿಲ್ಲ. ಹಿಂದಿ ಭಾಷಿಕರನ್ನೇ ಹೆಚ್ಚಾಗಿ ನೇಮಕಮಾಡಿಕೊಳ್ಳಲು ನಡೆಸಿರುವ ಹುನ್ನಾರ ಎಂದು ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.