ಕುತೂಹಲ ಕೆರಳಿಸಿದ ಅಮೀತ್ ಶಾ ಆ್ಯಂಡ್ ಬೆಲ್ಲದ ಭೇಟಿ

ಕುತೂಹಲ ಕೆರಳಿಸಿದ ಅಮೀತ್ ಶಾ ಆ್ಯಂಡ್ ಬೆಲ್ಲದ ಭೇಟಿ

ರಾಜ್ಯಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್-ಶಾ ಅವರನ್ನು ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಭೇಟಿಯಾಗಿ ಮಾತುಕತೆ ನಡೆಸಿದ್ದು, ರಾಜಕೀಯ ವಲಯದಲ್ಲಿ ತೀವ್ರ ಸಂಚಲನವನ್ನು ಮೂಡಿಸಿದೆ. ಏಕಾಏಕಿ  ಶಾಸಕ ಬೆಲ್ಲದ ಅವರು ಭಾರತೀಯ ಪಕ್ಷದ ಚಾಣುಕ್ಯ ಎಂದೇ ಹೆಸರಾದ ಅಮೀತ್ ಶಾ ಭೇಟಿಯಾಗಿ ಮಾತುಕತೆ ನಡೆಸಿರುವದು ಕುತೂಹಲ ಉಂಟುಮಾಡಿದೆ.
ಈಗಾಗಲೇ ಪಂಚ ರಾಜ್ಯಗಳ ಚುನಾವಣೆ ಮುಗಿದಿರುವದರಿಂದ ಕರ್ನಾಟಕ ರಾಜ್ಯದ ಸಚಿವ ಸಂಪುಟ ರಚನೆಯ ಹಾದಿ ಸುಗಮವಾಗಿದ್ದು ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನೀಡುವದು ಅಷ್ಟೇ ಅಲ್ಲದೇ ಪ್ರಮುಖ ಖಾತೆಗೆ ಡಿಮ್ಯಾಂಡ್ ಮಾಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿ.ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದಾಗ ಸಿಎಂ ಸ್ಥಾನದ ಆಕಾಂಕ್ಷಿಗಳ ಪಟ್ಟಿಯಲ್ಲಿ ಬೆಲ್ಲದ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬಂದಿತ್ತು. ಅಷ್ಟೇ ಅಲ್ಲದೇ ತಾವು ಅಭ್ಯರ್ಥಿ ಎನ್ನುವಂತೆ ದೆಹಲಿ ಮಟ್ಟದಲ್ಲಿ ರಾಜಕೀಯ ದಾಳ ಬೀಸಿದ್ದು ಈಗ ಗುಟ್ಟಾಗಿ ಉಳಿದಿಲ್ಲ.ಒಟ್ಟಿನಲ್ಲಿ ಶಾಸಕ ಅರವಿಂದ ಬೆಲ್ಲದ ನಾನು ಪಕ್ಷದ ಶಿಸ್ತಿನ ಸಿಪಾಯಿ ಪಕ್ಷದ ನಿಷ್ಠಾವಂತ ಸೇವಕ ಎಂದು ಬೆಲ್ಲದದಂತಹ ಮಾತನಾಡುತ್ತಲೇ  ರಾಜಕೀಯ ಸ್ಥಾನಮಾನಕ್ಕೆ ಜಾಣ ಹೆಜ್ಜೆ ಇಡುತ್ತಿರುವ ಬೆಲ್ಲದ ಅವರ ನಿಗೊಢ ನಡೆಯನ್ನು ಕಾಯ್ದುನೋಡಬೇಕಾಗಿದೆ.