ದುಬಾರಿಯಾದ ಯುಗಾದಿ- ಸಾಮಾನ್ಯ ಜನತೆಗೆ ಕಹಿ

ಯುಗಾದಿ ಹಬ್ಬದ ಅಂಗವಾಗಿ ಹೂ, ಹಣ್ಣು, ಕಾಯಿ, ಕಬ್ಬು, ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಭಾರೀ ದುಬಾರಿಯಾಗಿದ್ದು, ಜನಸಾಮಾನ್ಯರಿಗೆ ಈ ಬಾರಿಯ ಯುಗಾದಿ ಜನ್ರಿಗ್ಯಾಕೊ ಕಹಿ ಆದಂತಿದೆ. ಜನಸಾಮಾನ್ಯರು ಹೀಗಾಗಿ ದುಬಾರಿಯಾದ ವಸ್ತುಗಳನ್ನ ಕೊಂಡುಕೊಳ್ಳಲು ಹಿಂದೇಟು ಹಾಕುತ್ತಿದ್ದ ದೃಶ್ಯಗಳು ಹುಬ್ಬಳ್ಳಿಯ ಜನತಾ ಬಜಾರ್, ದುರ್ಗದಬೈಲ್, ಹಳೇ ಹುಬ್ಬಳ್ಳಿ, ಧಾರವಾಡ ಸಿಬಿಟಿ, ಸೂಪರ್ ಮಾರ್ಕೆಟ್ ಸೇರಿದಂತೆ ಹಲವೆಡೆ ಕಂಡುಬಂದ್ವು.ಇನ್ನು ಗ್ರಾಹಕರು ಯುಗಾದಿ ಅಂಗವಾಗಿ ಖರೀದಿ ಭರಾಟೆಯಲ್ಲಿ ತೊಡಗಿದ್ರೆ ಮತ್ತೊಂದೆಡೆ ದುಬಾರಿ ಬೆಲೆಯಿಂದಾಗಿ ಜನತೆ ಕಂಗಾಲಾಗುವಂತಾಗಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದಂತಾಗಿದೆ.
ಸಾಮಾನ್ಯ ದಿನಗಳಲ್ಲಿ ಪ್ರತಿ ಮಾರು ಹೂವಿನ ಬೆಲೆ 20 ಇದ್ರೆ ಇಂದು 70 ರಿಂದ 100 ರೂಪಾಯಿಗೆ ಏರಿಕೆಯಾಗಿದೆ.ಒಟ್ನಲ್ಲಿ ಗ್ರಾಹಕರಿಗೆ ಯುಗಾದಿ ಸಿಹಿ ಬದಲು ಕಹಿ ನೀಡಿದಂತಾದದ್ದು ಸುಳ್ಳಲ್ಲ.