ಬಿದ್ದ ಬೈಕ ಸವಾರನನ್ನು ನೋಡಿ ಸಚಿವ ಮುನೇನಕೊಪ್ಪ ಮಾಡಿದ್ದನ್ನೋ ಗೋತ್ತಾ.
ಧಾರವಾಡ...
ಮುಂದೆ ಹೋಗುತ್ತಿದ್ದ ಲಾರಿಯೊಂದಕ್ಕೆ ಡಿಕ್ಕಿ ಹೊಡೆದು ನರಳುತ್ತಿದ್ದ ಬೈಕ್ ಸವಾರನನ್ನ ಉಪಚರಿಸಿ ಆಸ್ಪತ್ರೆಗೆ ರವಾನೆ ಮಾಡಿ ಮಾನವೀಯತೆ ಮೆರೆದ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಎಲ್ಲರ ಗಮನ ಸೆಳೆದರು. ಹುಬ್ಬಳ್ಳಿಯ ಹೊರವಲಯದ ತಾರಿಹಾಳ ಬೈಪಾಸ್ ಹತ್ತಿರ ನಡೆದ ಲಾರಿ ಹಾಗೂ ಬೈಕ್ ಅಪಘಾತದಲ್ಲಿ ಬೈಕ್ ಸವಾರ ಆಯತಪ್ಪಿ ಹೈವೇ ಪಕ್ಕದ ರಸ್ತೆಯಲ್ಲಿ ಬಿದ್ದಿರುವ ಸಂದರ್ಭದಲ್ಲಿ ಧಾರವಾಡಕ್ಕೆ ಹೊರಟಿದ್ದ ಸಚಿವರು ತಮ್ಮ ವಾಹನ ನಿಲ್ಲಿಸಿ ಬೈಕ್ ಸವಾರನಿಗೆ ನೀರಿನ ಬಾಟಲ್ ನೀಡಿ ಧೈರ್ಯ ಹೇಳಿದ್ದಾರೆ.