NH4 ರ ಅವ್ಯವಸ್ಥೆ ಆಗರ- ಮಂಜುನಾಥ ಮಣ್ಣಣ್ಣವರ

ಶಿಗ್ಗಾವಿ: ನಗರದಲ್ಲಿ ಪಟ್ಟಣದ ವ್ಯಾಪ್ತಿಯ ಶ್ರೀ ರಂಭಾಪುರಿ ಕಾಲೇಜ್ ನಿಂದ ಕುರುಶಾಪುರ ಗ್ರಾಮದ ವರೆಗಿನ ರಾಷ್ಟ್ರೀಯ ಹೆದ್ದಾರಿ NH4 ನಿರ್ಮಾಣವನ್ನು ನಿರ್ಲಕ್ಷ್ಯ ಧೋರಣೆ ಯಿಂದ ನಾಗರಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗಿದೆ ಎಂದು ಮಂಜುನಾಥ ಮಣ್ಣಣ್ಣವರ ಸರಕಾರಕ್ಕೆ ಆಗ್ರಹಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಾಮಗಾರಿ ಪ್ರಾರಂಭವಾಗಿದ್ದು, ಇಲ್ಲಿಯವರೆಗೆ ಕಾಮಗಾರಿಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡದೆ ಶಿಗ್ಗಾಂವಿ ಪಟ್ಟಣದ ಹೊರವಲಯದಲ್ಲಿ ಮಳೆಗಾಲದ ನೀರನ್ನು ಹಾಗೂ ಒಳಗಿನ ಚರಂಡಿಯ ನೀರನ್ನು ಸಮರ್ಪಕ ರೀತಿಯಲ್ಲಿ ಹೊರಹಾಕುವ ಕೆಲಸ ಮಾಡದೆ ರಸ್ತೆ ಮಾಡುತ್ತಿರುವುದು ಸರ್ಕಾರದ ಹಣ ವ್ಯರ್ಥವಾಗುತ್ತದೆ. NH4 ರಲ್ಲಿ ವ್ಯವಸ್ಥಿತ ಸಿಡಿ ನಿರ್ಮಾಣ ಹಾಗೂ ಕಾಲುವೆಗಳನ್ನು ನಿರ್ಮಿಸದೆ ಮಳೆಗಾಲದ ನೀರು ಸಂಪೂರ್ಣ ವಸತಿ ಪ್ರದೇಶಗಳಲ್ಲಿ ಹೋಗುವ ರೀತಿಯಲ್ಲಿ ಕಾಮಗಾರಿಯನ್ನು ಮಾಡುತ್ತಿದ್ದು ಈ ಕುರಿತು ಪ್ರಾಧಿಕಾರದ ಅಧಿಕಾರಿಗಳಿಗೆ ಹಾಗೂ ಕೇಂದ್ರ ಸಚಿವರಿಗೆ ನಾಗರಿಕರು ಹಾಗೂ ವಿವಿಧ ಸಂಘ ಸಂಸ್ಥೆಗಳು ಹಲವು ಬಾರಿ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಕಾಮಗಾರಿ ವೀಕ್ಷಿಸಿದ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತ ಬಂಡಿವಡ್ಡರ್, ನ್ಯಾಯವಾದಿ ಸಾಮಾಜಿಕ ಕಾರ್ಯಕರ್ತ ಬಸವರಾಜ ಕಟ್ಟಿ, ಡಿಎಸ್ಎಸ್ ಮುಖಂಡ ಅಶೋಕ ಕಾಳೆ ಆದಷ್ಟೂ ಬೇಗ ಕಾಮಗಾರಿ ಮಾಡಲು ಆಗ್ರಹಿಸಿದ್ದಾರೆ.