ಉದ್ಘಾಟನೆಗೆ ಮುನ್ನವೇ ಕುಸಿದ 13 ಕೋಟಿ ರೂ. ವೆಚ್ಚದ ಸೇತುವೆ

ಉದ್ಘಾಟನೆಗೂ ಮುನ್ನವೇ 13 ಕೋಟಿ ರೂ. ವೆಚ್ಚದ 206 ಮೀಟರ್ ಉದ್ದದ ಬ್ರಿಡ್ಜ್ ಕುಸಿದಿರುವಂತಹ ಘಟನೆ ಬಿಹಾರನಲ್ಲಿ ನಡೆದಿದೆ. ಸದ್ಯ ಬ್ರಿಡ್ಜ್ ಕುಸಿದಿರುವ ವಿಡಿಯೋ ವೈರಲ್ ಆಗಿದೆ. ಬೇಗುಸರಾಯ್‍ನಲ್ಲಿ ಆಕೃತಿ ತೊಲ ಚೌಕಿ ಮತ್ತು ಬಿಷ್ಣಾಪುರದ ಆಹೋಕ್ ಗಂಡಕ್ ಘಾಟ್ ಮಧ್ಯೆ ಸೇತುವೆ ನಿರ್ಮಿಸಲಾಗಿತ್ತು. 2016ರಲ್ಲಿ ಮುಖ್ಯಮಂತ್ರಿ ನರ್ಬಾಡ್ ಯೋಜನೆಯಡಿಯಲ್ಲಿ ಈ ಸೇತುವೆ ನಿರ್ಮಾಣ ಕಾರ್ಯ ಆರಂಭವಾಗಿತ್ತು. ಕಾಮಗಾರಿ 2017ರಲ್ಲಿ ಮುಗಿದಿದ್ದರೂ ರಸ್ತೆ ಸಂಪರ್ಕದ ಕೊರತೆಯಿಂದ ಉದ್ಘಾಟನೆ ಮಾಡಿರಲಿಲ್ಲ.