ದೆಹಲಿ ಮುಖ್ಯಮಂತ್ರಿ ಭೇಟಿಯಾದ WWE ಸ್ಟಾರ್ ಗ್ರೇಟ್ ಖಲಿ

ದೆಹಲಿ ಮುಖ್ಯಮಂತ್ರಿ ಭೇಟಿಯಾದ WWE ಸ್ಟಾರ್ ಗ್ರೇಟ್ ಖಲಿ

ನವದೆಹಲಿ:ಮಾಜಿ WWE ಸ್ಟಾರ್ 'ದಿ ಗ್ರೇಟ್ ಖಲಿ' ಎಂದೇ ಜನಪ್ರಿಯರಾದ ದಲಿಪ್ ಸಿಂಗ್ ರಾಣಾ ಅವರು ಗುರುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾದರು.

ಅಧಿಕೃತ ಪ್ರಕಟಣೆಯ ಪ್ರಕಾರ, ದೆಹಲಿ ಮುಖ್ಯಮಂತ್ರಿಯೊಂದಿಗಿನ ಅವರ ಭೇಟಿಯ ಸಮಯದಲ್ಲಿ ಖಲಿ ಅವರು ಎಎಪಿ ಸರ್ಕಾರದ ಅಡಿಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕೈಗೊಂಡ ಉಪಕ್ರಮಗಳಿಗೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಮಾತ್ರವಲ್ಲದೆ ಭವಿಷ್ಯದಲ್ಲಿ ಸರ್ಕಾರದ ಪ್ರಯತ್ನಗಳನ್ನು ಬೆಂಬಲಿಸುವ ಇಚ್ಛೆಯನ್ನು ತೋರಿಸಿದರು.ಅವರ ಜೊತೆ ದೆಹಲಿ ಶಾಸಕ ಜರ್ನೈಲ್ ಸಿಂಗ್ ಕೂಡ ಇದ್ದರು.

'ಇಂದು, ನಾನು ಭಾರತವನ್ನು ವಿಶ್ವದಾದ್ಯಂತ ಪ್ರಸಿದ್ಧಿಗೊಳಿಸಿದ ಕುಸ್ತಿಪಟು ದಿ ಗ್ರೇಟ್ ಖಲಿ ಅವರನ್ನು ಭೇಟಿ ಮಾಡಿದ್ದೇನೆ. ಅವರು ದೆಹಲಿಯಲ್ಲಿ ವಿದ್ಯುತ್, ನೀರು ಮತ್ತು ಶಾಲೆ ಮತ್ತು ಆಸ್ಪತ್ರೆಯಲ್ಲಿ ಮಾಡಿದ ಕೆಲಸವನ್ನು ಇಷ್ಟಪಟ್ಟಿದ್ದಾರೆ' ಎಂದು ಕೇಜ್ರಿವಾಲ್ ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದ್ದಾರೆ.ಸರ್ಕಾರದ ಪ್ರಕಟಣೆಯ ಪ್ರಕಾರ, ಖಲಿ ಅವರು ಮುಖ್ಯಮಂತ್ರಿಯೊಂದಿಗೆ ಮಾತನಾಡುವಾಗ, ದೆಹಲಿ ಅಭಿವೃದ್ಧಿ ಮಾದರಿಯನ್ನು ದೇಶದ ಇತರ ಭಾಗಗಳೊಂದಿಗೆ ಹೋಲಿಕೆ ಮಾಡಿದರು ಮತ್ತು 'ರಾಷ್ಟ್ರ ರಾಜಧಾನಿಯಲ್ಲಿ ಇಂತಹ ಕೆಲಸ ನಡೆಯುವುದನ್ನು ನೋಡಿ ತುಂಬಾ ಹೆಮ್ಮೆಪಡುತ್ತೇನೆ ಎಂದು ಹೇಳಿದ್ದಾರೆ.

'ದಿಲ್ಲಿಯಲ್ಲಿ ನಡೆದಿರುವ ಬೆಳವಣಿಗೆಯಿಂದ ಅವರು ಆಘಾತಕ್ಕೊಳಗಾಗಿದ್ದಾರೆ ಮತ್ತು ಸಮಾಜದ ಒಳಿತಿಗಾಗಿ ಕೇಜ್ರಿವಾಲ್ ಸರ್ಕಾರವನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಬೆಂಬಲಿಸಲು ಸಿದ್ಧರಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ.ಮುಂದಿನ ವರ್ಷ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆಗೆ ಮುನ್ನ ಈ ಸಭೆ ನಡೆದಿದೆ.