ದಿ ಕಾಶ್ಮೀರಿ ಫೈಲ್ ಚಿತ್ರವನ್ನ ಬಿಜೆಪಿ ರಾಜಕೀಯಕ್ಕೆ ಬಳಸಿಕೊಳ್ತಿದೆ- ಕಾಂಗ್ರೆಸ್ ಮುಖಂಡ ನೀರಲಕೇರಿ ಅಸಮಾಧಾನ

ಧಾರವಾಡ: ಕಾಶ್ಮೀರಿ ಪಂಡಿತರ ಜೇವನಾಧಾರಿತವಾಗಿ ನಿರ್ಮಾಣಗೊಂಡು ತೆರೆ ಮೇಲೆ ಬಂದಿರುವ ದಿ ಕಾಶ್ಮೀರಿ ಫೈಲ್ ದೇಶದೆಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಆದರೆ, ಈ ಚಿತ್ರದ ಹೆಸರಿನಲ್ಲಿ ಭಾರತೀಯ ಜನತಾ ಪಕ್ಷ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ ಎಂಬ ಆರೋಪವೂ ಈಗ ಕೇಳಿ ಬರುತ್ತಿದೆ.
ದಿ ಕಾಶ್ಮೀರಿ ಫೈಲ್ ಬಿಜೆಪಿಯ ಸಂಪೂರ್ಣ ರಾಜಕೀಯ ತಂತ್ರಗಾರಿಕೆ. ಇಡೀ ದೇಶದಾದ್ಯಂತ ಅನೇಕ ಜ್ವಲಂತ ಸಮಸ್ಯೆಗಳು ತಾಂಡವಾಡುತ್ತಿರುವಾಗ ಇಂತಹ ಸಿನೆಮಾದ ಅವಶ್ಯಕತೆ ಇತ್ತಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ ಎಂಬುದು ಕಾಂಗ್ರೆಸ್ ನ ವಾದ.
ಕಾಂಗ್ರೆಸ್ ನ ಹಿರಿಯ ಮುಖಂಡರು, ವಕೀಲರು ಆದ ನೀರಲಕೇರಿ ಅವರು ಶುಕ್ರವಾರ ಮಾಧ್ಯಮ ಮಿತ್ರರೊಂದಿಗೆ ಚಿತ್ರ ವೀಕ್ಷಿಸಿಸಿದ ನಂತರ ಹಲವಾರು ಸಂಗತಿಗಳನ್ನು ತೆರೆದಿಟ್ಟಿದ್ದಾರೆ.
ಈ ಚಲನಚಿತ್ರದಿಂದ ಸಮಾಜದಲ್ಲಿ ಅಂತಹ ಹೇಳಿಕೊಳ್ಳುವಂತಹ ಪರಿಣಾಮ ಆಗದು. ಸದ್ಯ ಸಮಾಜದ ಶಾಂತಿ ಕದಡಲು ಮತ್ತು ಕೋಮು ದಳ್ಳುರಿಗೆ ಕಾರಣವಾಗುವ ಅಂಗಳನ್ನು ಅತಿಯಾಗಿ ರಂಜಿಸಲಾಗಿದೆ ಎನ್ನುವುದು ಅವರ ಅಭಿಪ್ರಾಯವಾಗಿದೆ.
1989-91ರಲ್ಲಿ ಕೇಂದ್ರದಲ್ಲಿ ಇದ್ದದ್ದು ಬಿಜೆಪಿ ಸರ್ಕಾರ. ಈ ಸರ್ಕಾರಕ್ಕೆ ಬೆಂಬಲ ಕೊಟ್ಟದ್ದು ಬಿಜೆಪಿ. ಕಾಶ್ಮೀರದಲ್ಲಿ ಆಗ ರಾಜ್ಯಪಾಲರಾಗಿ ನೇಮಕವಾಗಿದ್ದು ಆರ್ ಎಸ್ ಎಸ್ ಮೂಲದ ವ್ಯಕ್ತಿ. ವಾಸ್ತವ ಪರಿಸ್ಥಿತಿ ಹೀಗಿರುವಾಗ ಆ ಸಂದರ್ಭದಲ್ಲಿ ಕಾಶ್ಮೀರಿ ಪಂಡಿತರಿಗೆ ಅನ್ಯಾಯವಾಗಿರುವುದಕ್ಕೆ ಕಾಂಗ್ರೆಸ್ ಮೇಲೆ ಗೂಬೆ ಕೂಡಿಸುವ ಕೆಲಸ ನಡೆದಿರುವುದು ನಾಚಿಕಗೇಡಿನ ಸಂಗತಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಚಿತ್ರದ ಇನ್ನೊಂದು ಅತೀ ದು:ಖಕರ ಸಂಗತಿ ಎಂದರೆ, ಚುನಾವಣೆಯನ್ನು ಹೇಗೆ ಮಾಡಬೇಕೆಂಬುದನ್ನೂ ಕೂಡ ತೋರಿಸಿರುವುದು ಹೀನ ಕೆಲಸ ಅಲ್ಲದೇ ಮತ್ತೇನೂ ಅಲ್ಲ ಎಂದು ನೀರಲಕಕೇರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು ಎಲ್ಲ ಚಿತ್ರಗಳಿಗೂ ಸೆನ್ಸಾರ್ ಇರುತ್ತೆ. ಆದರೆ ಈ ಚಿತ್ರಕ್ಕೆ ಸೆನ್ಸಾರ್ವೇ ಇಲ್ಲ. ಚಿತ್ರದಲ್ಲಿ ಕೆಲವು ದೃಶ್ಯಗಳನ್ನು ಭೀಭತ್ಸವಾಗಿ ತೋರಿಸಿರುವುದು ಖೇದಕರ.
ಇನ್ನೂ, ಸ್ಥಳೀಯ ಬಿಜೆಪಿ ನಾಯಕರು ಚಿತ್ರ ವೀಕ್ಷಣೆಗೆ ಅವಕಾಶ ಮಾಡಿದ್ದಾರೆ. ಆದರೆ ಹಲವಾರು ಜ್ವಲಂತ ಸಮಸ್ಯೆಗಳಿದ್ದರೂ ಅತ್ತ ಗಮನ ಹರಿಸಿಲ್ಲ.ಸ್ವತ: ಜಗದೀಶ್ ಶೆಟ್ಟರ್ ಕ್ಷೇತ್ರದಲ್ಲಿಯೇ ನೀರಿನ ಸಮಸ್ಯೆ ತಾಂಡವಾಡುತ್ತಿದೆ. ಆದರೂ ಗಮನ ಹರಿಸಿಲ್ಲ. ಆದರೆ ಈ ಚಿತ್ರದ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುತ್ತಿದ್ದಾರೆ ಎಂದಿದ್ದಾರೆ .