ಮೌಲ್ಯಮಾಪನದಲ್ಲಿ ಶಿಕ್ಷಕರು ತಪ್ಪು ಮಾಡಿದ್ರೆ ದಂಡದ ಜೊತೆ ಅಮಾತಿನ ಶಿಕ್ಷೆ' : ಸಚಿವ ಬಿ.ಸಿ ನಾಗೇಶ್ ಎಚ್ಚರಿಕೆ
ಬೆಂಗಳೂರು : ಇನ್ನು ಮುಂದೆ ಶಿಕ್ಷಕರು ಮೌಲ್ಯ ಮಾಪನ ಮಾಡುವಾಗ ಬಹಳ ಎಚ್ಚರಿಕೆಯಿಂದಿರಬೇಕು ಇಲ್ಲವಾದಲ್ಲಿ ಬಹಳ ಬೆಲೆ ತೆರಬೇಕಾಗುತ್ತದೆ. ಮೌಲ್ಯಮಾಪನದ ವೇಳೆ ನಿರ್ಲಕ್ಷ್ಯ ವಹಿಸಿದ್ರೆ ಕೆಲಸಕ್ಕೆ ಕುತ್ತು ಬರಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಇನ್ನು ಮುಂದೆ ಮೌಲ್ಯಮಾಪನದಲ್ಲಿ ನಿರ್ಲಕ್ಷ್ಯ ತೋರಿಸಿದ ಉಪನ್ಯಾಸಕರಿಗೆ ದಂಡದ ಜೊತೆ ಅಮಾನತಿನ ಶಿಕ್ಷೆ ನೀಡಲು ಇಲಾಖೆ ಮುಂದಾಗಿದೆ.
ಹೌದು, 2021-22 ರಲ್ಲಿ ಎಂಟು ಉಪನ್ಯಾಸಕರು ಮೌಲ್ಯಮಾಪನ ಮಾಡುವ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರಿದ್ದರು , ಇಂಗ್ಲೀಷ್ ಹಾಗೂ ಭೌತ ಶಾಸ್ತ್ರ ಮರು ಮೌಲ್ಯಮಾಪನ ಮಾಡುವಾಗ ಒಂಬತ್ತು ಪುಟಗಳನ್ನು ತಿದ್ದಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆ ಎಂಟು ಉಪನ್ಯಾಸಕರನ್ನು ಅಮಾನತು ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಅದೇ ರೀತಿ ಇನ್ನು ಮುಂದೆ ಮೌಲ್ಯಮಾಪನದಲ್ಲಿ ನಿರ್ಲಕ್ಷ್ಯ ತೋರಿಸಿದ ಉಪನ್ಯಾಸಕರಿಗೆ ದಂಡದ ಜೊತೆ ಅಮಾನತಿನ ಶಿಕ್ಷೆ ನೀಡಲು ಇಲಾಖೆ ಮುಂದಾಗಿದೆ. ಈ ನಿರ್ಧಾರ 2022-23 ನೇ ಸಾಲಿಗೂ ಅನ್ವಯವಾಗುತ್ತದೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.
ವಾರಾಂತ್ಯದೊಳಗೆ K-TET ಕೀ ಉತ್ತರ ಪ್ರಕಟ
ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (K-TET) ಸುಸೂತ್ರವಾಗಿ ನಡೆದಿದೆ. ಅರ್ಜಿ ಸಲ್ಲಿಸಿದ ಒಟ್ಟಾರೆ ಅಭ್ಯರ್ಥಿಗಳ ಪೈಕಿ ಶೇ.92ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಈ ವಾರಾಂತ್ಯದೊಳಗೆ ಕೀ ಉತ್ತರಗಳನ್ನು ಪ್ರಕಟಿಸಲಾಗುತ್ತದೆ ಅಂತ ಸಚಿವ ಬಿಸಿ ನಾಗೇಶ್ ಅವರು ಟ್ವಿಟ್ ಮೂಲಕ ಮಾಹಿತಿ ನೀಡಿದ್ದಾರೆ.
2022ನೇ ಸಾಲಿನ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಟಿಇಟಿ) ನಿನ್ನೆ ಅಂದ್ರೆ ಭಾನುವಾರ ಟಿಇಟಿ ಪರೀಕ್ಷೆಯು ರಾಜ್ಯಾದ್ಯಾಂತ 35 ಜಿಲ್ಲೆಗಳಲ್ಲಿ ನಡೆಯಿತು. ಪತ್ರಿಕೆ-1 ( 1 ರಿಂದ 5ನೇ ತರಗತಿ) ಪರೀಕ್ಷೆಗೆ 1,54,929 ಅರ್ಜಿ ಸಲ್ಲಿಕೆಯಾದರೆ, ಪತ್ರಿಕೆ -2 ( 6 ರಿಂದ 8ನೇ ತರಗತಿ) ಕ್ಕೆ 2,06,456 ಅರ್ಜಿಗಳು ಸೇರಿದಂತೆ ಒಟ್ಟು 3,61,385 ಅರ್ಜಿಗಳು ಸಲ್ಲಿಕೆಯಾಗಿವೆ. ಇದರಲ್ಲಿ 1,31,864 ಅರ್ಜಿಗಳು ಪತ್ರಿಕೆ-1 ಮತ್ತು ಪತ್ರಿಕೆ- 2 ಕ್ಕೂ ಸಲ್ಲಿಕೆ ಆಗಿವೆ. ಇನ್ನು ಮುಂದೆ ವರ್ಷಕ್ಕೆ ಎರಡು ಬಾರಿ ಟಿಇಟಿ ನಡೆಸಲು ನಿರ್ಧರಿಸಿದೆ.ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸಲು ಟಿಇಟಿ ಉತ್ತೀರ್ಣ ಕಡ್ಡಾಯವಾಗಿರುವುದರಿಂದ ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳು ಈ ಪರೀಕ್ಷೆಯನ್ನು ಬರೆದು ಪಾಸಾಗಬೇಕಾಗಿದೆ.